ಮಂಗಳೂರು: ನಗರದ ಹೊರವಲಯದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 43 ವಿಕಲಚೇತನ ಫಲಾನುಭವಿಗಳಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಚೆಕ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯತ್ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ಹಾಗೂ ನಿಸರ್ಗ ಗ್ರಂಥಾಲಯ ಹೀಗೆ ಮೂರು ರೀತಿಯ ಓದುವ ವ್ಯವಸ್ಥೆಗೆ ಚಾಲನೆ ನೀಡಿ ಓದುವ ಅಭ್ಯಾಸ, ಅಧ್ಯಯನಶೀಲತೆ ಎಲ್ಲರಿಗೂ ಅಗತ್ಯ ಎಂದರು.
ಪಂಚಾಯತ್ ಅಧ್ಯಕ್ಷರಾದ ಉಮೇಶ್ ಕುಲಾಲ್, ಸದಸ್ಯರು, ಗಣ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
09/04/2022 07:07 pm