ಮುಲ್ಕಿ: ರಕ್ತದಾನವು ಅತ್ಯುತ್ತಮ ದಾನವಾಗಿದ್ದು, ಇನ್ನೊಬ್ಬರ ಜೀವ ಉಳಿಸಿದ ಸಂತ್ರಪ್ತಿ ನಮ್ಮದಾಗುತ್ತದೆ ಎಂದು ಮುಲ್ಕಿ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್ ನ ಧರ್ಮಗುರುಗಳಾದ ವಂ.ಸಿಲ್ವೆಸ್ಟರ್ ಡಿಕೋಸ್ಟಾ ಹೇಳಿದರು.
ಮುಲ್ಕಿಯ ಸೈಂಟ್ ಜೋಸೆಫ್ ಸಭಾಂಗಣದಲ್ಲಿ ಭಾನುವಾರ ಕರಿತಾಸ್ ಇಂಡಿಯಾ ನವದೆಹಲಿ, ಸಿಒಡಿಪಿ ಮಂಗಳೂರು, ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್ ಮುಲ್ಕಿ ,ಕ್ರಿಸ್ತ ಜ್ಯೋತಿ ಸ್ವಸಹಾಯ ಸಂಘ,ಐಸಿವೈಎಂ ಮುಲ್ಕಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ನಡೆದ ರಕ್ತದಾನ ಶಿಭಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಡಾ. ಆಂಟನಿ ಡಿಸೋಜ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್ ನ ಧರ್ಮಗುರುಗಳಾದ ವಂ.ಸಿಲ್ವೆಸ್ಟರ್ ಡಿಕೋಸ್ಟಾ ವಹಿಸಿದ್ದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕ್ರಿಸ್ತ ಜ್ಯೋತಿ ಸ್ವಸಹಾಯ ಸಂಘದ ಅಧ್ಯಕ್ಷ ವಲೇರಿಯನ್ ರೆಬೆಲ್ಲೋ, ಶಿಲ್ಪಾ ಡಿಸೋಜಾ, ಐಸಿವೈಎಂ ಮುಲ್ಕಿ ಅಧ್ಯಕ್ಷ ಅಶ್ವಿನ್ ಅಲ್ವಾರಿಸ್, ಚರ್ಚ್ ಆರೋಗ್ಯ ಆಯೋಗದ ಸಂಚಾಲಕಿ ಶಾಂತಿ ಡೆನ್ನಿಸ್ ಉಪಸ್ಥಿತರಿದ್ದರು.
Kshetra Samachara
03/04/2022 06:00 pm