ಮುಲ್ಕಿ: ಮುಲ್ಕಿ ಸಮೀಪದ ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಮುಂಬೈ ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದ ಸುವರ್ಣ ಬಾಬಾ ಭೇಟಿ ನೀಡಿದರು.
ದೇವಳದ ಅರ್ಚಕ ಮಧುಸೂದನ ಆಚಾರ್ಯ ವಿಶೇಷ ಪ್ರಾರ್ಥನೆ ನಡೆಸಿ ಪ್ರಸಾದ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ್ ಭಟ್ ದೇವಳದ ವತಿಯಿಂದ ಅವರನ್ನು ಗೌರವಿಸಿ ಜೀರ್ಣೋದ್ದಾರದ ಬಗ್ಗೆ ಮಾಹಿತಿ ನೀಡಿ ದಾಗ ದೇವಳದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕುಮಾರಮಂಗಿಲ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಶಿಮಂತೂರು, ಕೇಶವ ಅಂಚನ್ ಮುಂಬೈ, ರಾಹುಲ್ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/03/2022 12:36 pm