ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಜನಮನ ಸೂರೆಗೊಂಡ 'ಪುತ್ತೂರು ದೇವರಗದ್ದೆ ಕಂಬಳ'; ಕೋಣಗಳ ತುರುಸಿನ ಸ್ಪರ್ಧೆ

ಪುತ್ತೂರು: ಇದೀಗ ಕರಾವಳಿಯಾದ್ಯಂತ ಕಂಬಳದ ಪರ್ವ ಆರಂಭಗೊಂಡಿದೆ. ದೇವರಗದ್ದೆಯ ಕಂಬಳ ಎಂದೇ ಪ್ರಸಿದ್ಧವಾಗಿರುವ ಪುತ್ತೂರು ಕಂಬಳ 29 ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ.

ಪುತ್ತೂರಿನ ಕಂಬಳಕ್ಕೆ ಉಭಯ ಜಿಲ್ಲೆಗಳಲ್ಲಿ ನಡೆಯುವ ಇತರ ಕಂಬಳಗಳಿಗಿಂತ ಅತ್ಯಂತ ಹೆಚ್ಚಿನ ಸಂಖ್ಯೆಯ ಕೋಣಗಳು ಬರುವುದು ಇಲ್ಲಿನ ವಿಶೇಷತೆ. ಈ ಬಾರಿ 200ಕ್ಕೂ ಮಿಕ್ಕಿದ ಕೋಣಗಳು ಈ ಕಂಬಳದಲ್ಲಿ ಭಾಗಿಯಾಗಿದ್ದು, ವಿವಿಧ ವಿಭಾಗಗಳಲ್ಲಿ ಕೋಣಗಳ ಓಟ ಸ್ಪರ್ಧೆ ನಡೆಯುತ್ತಿದೆ.

ಜಯಕರ್ನಾಟಕ ಸ್ಥಾಪಕಾಧ್ಯಕ್ಷ ದಿವಂಗತ ಮುತ್ತಪ್ಪ ರೈ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಕಂಬಳ ಈಗಲೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಖ್ಯಾತ ಚಿತ್ರ ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಅವರು ತನ್ನ ಹೊಸ ಕಂಬಳಾಧಾರಿತ ಚಿತ್ರದ ಚಿತ್ರೀಕರಣವನ್ನೂ ಪುತ್ತೂರು ಕಂಬಳದಲ್ಲಿಯೇ ನಡೆಸುತ್ತಿರುವುದು ವಿಶೇಷತೆಯಾಗಿದೆ.

Edited By : Shivu K
Kshetra Samachara

Kshetra Samachara

20/03/2022 12:44 pm

Cinque Terre

16.16 K

Cinque Terre

0

ಸಂಬಂಧಿತ ಸುದ್ದಿ