ಕಾಪು: ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಳತ್ತೂರು, ಮಲಬಾರ್ ಗೋಲ್ಡ್ ಉಡುಪಿ, ಐಶ್ವರ್ಯ ಜ್ಯುವೆಲರ್ ಶಿರ್ವ ಇವರ ಸಹಯೋಗದೊಂದಿಗೆ ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಭವನದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ನೆರವೇರಿಸಿ ಮಾತನಾಡಿದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ನಮ್ಮೂರಿನ ಸಾಧಕರು, ಸಮಾಜ ಸೇವಕರನ್ನು ನಾವು ಗುರುತಿಸಿ ಗೌರವಿಸಿದಾಗ ಇತರರಿಗೂ ಸಮಾಜ ಸೇವೆ ಸ್ಫೂರ್ತಿ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ದಿವಾಕರ ಬಿ ಶೆಟ್ಟಿ, ದಿವಾಕರ ಡಿ. ಶೆಟ್ಟಿ, ಮಹಮ್ಮದ್ ಫಾರೂಕ್ ಚಂದ್ರನಗರ ಸೇರಿದಂತೆ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶೇಖರ ಶೆಟ್ಟಿ, ನವೀನ್ ಚಂದರ್, ಲೀಲಾಧರ ಶೆಟ್ಟಿ, ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.
Kshetra Samachara
14/03/2022 04:48 pm