ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಸಚಿವರ ಜೊತೆ ಪೌರ ಕಾರ್ಮಿಕರ ಹೆಲಿಕಾಪ್ಟರ್ ಪಯಣ!

ಕಾರ್ಕಳ: ಜಿಲ್ಲೆಯ ಕಾರ್ಕಳದಲ್ಲಿ ಕಾರ್ಕಳ ಉತ್ಸವ-2022 ನಡೆಯುತ್ತಿದೆ.ಹತ್ತು ದಿನಗಳ ಕಾಲ ಉತ್ಸವ ನಡೆಯಲಿದ್ದು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಮುಖ್ಯವಾಗಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸಾರಥ್ಯದಲ್ಲಿ ಉತ್ಸವ ನಡೆಯಲಿದೆ.

ಉದ್ಘಾಟನೆ ಅಂಗವಾಗಿ ಸಚಿವ ಸುನಿಲ್ ಕುಮಾರ್ ಸ್ವರಾಜ್ ಮೈದಾನದಲ್ಲಿ ಪೌರ ಕಾರ್ಮಿಕರ ಜೊತೆ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿದರು.ಉತ್ಸವದ ಅಂಗವಾಗಿ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಲು ಅವಕಾಶವಿದೆ.ಹೆಲಿಕಾಪ್ಟರ್ ನಲ್ಲಿ ಒಂದು ಸುತ್ತು ಪ್ರಯಾಣಿಸಲು ಹಲವರು ಬುಕ್ ಮಾಡಿದ್ದಾರೆ.

ಈ ಮಧ್ಯೆ ಸಚಿವ ಸುನಿಲ್ ಕುಮಾರ್ ಕಾರ್ಕಳ ಉತ್ಸವಕ್ಕೆ ಸ್ಚಚ್ಛತಾ ಕಾರ್ಯ ನಡೆಸುತ್ತಿರುವ ಐವರು ಪೌರ ಕಾರ್ಮಿಕರ ಜೊತೆ ಹೆಲಿಕಾಪ್ಟರ್ ನಲ್ಲಿ ತಿರುಗಾಡಿಸಿ ಖುಷಿ ಪಟ್ಟರು.

Edited By : Manjunath H D
Kshetra Samachara

Kshetra Samachara

11/03/2022 04:38 pm

Cinque Terre

5.67 K

Cinque Terre

0

ಸಂಬಂಧಿತ ಸುದ್ದಿ