ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಕುದುರೆ ಸವಾರಿಯ ವಿಶಿಷ್ಟ ಮಹಿಳಾ ದಿನಾಚರಣೆ

ಮಂಗಳೂರು: ಮಹಿಳೆಯರೇ ಕುದುರೆ ಸಂಚಾರ ಮಾಡುವ ಮೂಲಕ ಮಂಗಳೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಮಂಗಳೂರಿನ ಹಾರ್ಸ್ ರೈಡಿಂಗ್ ಅಕಾಡೆಮಿಯಿಂದ ಈ ಕುದುರೆ ಸವಾರಿಯನ್ನು ಆಯೋಜನೆ ಮಾಡಲಾಗಿದೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಮಹಿಳೆಯರೇ ನಗರದುದ್ದಕ್ಕೂ ಕುದುರೆ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು.

ದ.ಕ.ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಕುದುರೆ ಸವಾರಿಗೆ ಚಾಲನೆ ನೀಡಿದರು.

ಈ ಕುದುರೆ ಸವಾರಿಯು ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡು ಕ್ಲಾಕ್ ಟವರ್ ಮುಂಭಾಗದಿಂದ ಕೆಎಸ್ ರಾವ್ ರಸ್ತೆಯಾಗಿ ನವಭಾರತ ಸರ್ಕಲ್, ಪಿವಿಎಸ್ ವೃತ್ತವಾಗಿ ಎಂಜಿ ರೋಡ್ ಮಾರ್ಗವಾಗಿ ಲಾಲ್ ಬಾಗ್ ಕೆಎಸ್ ಆರ್ ಟಿಸಿಯಾಗಿ ಬಿಜೈ ಕೆಪಿಟಿ ತಲುಪಿ ಕದ್ರಿ ಮಾರ್ಕ್ ಬಳಿಯ ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಅಂತ್ಯಗೊಂಡಿತು.

ಈ ಹಾರ್ಸ್ ರೈಡಿಂಗ್ ನಲ್ಲಿ 20 ಮಂದಿ ಯುವತಿಯರು ಭಾಗವಹಿಸಿದ್ದರು. 7 ಕುದುರೆಗಳಿದ್ದು, ಒಂದು ಪೋನಿ ಕಾರ್ಟ್ ಬಳಸಲಾಗಿತ್ತು. ಪೋನಿ ಕಾರ್ಟ್ ಅನ್ನು ಮಹಾರಾಷ್ಟ್ರ ಮೂಲದ ತೇಜಸ್ವಿತಾ ಎಂಬವರು ಮಹಾರಾಷ್ಟ್ರದ ಪಾರಂಪರಿಕ ಶೈಲಿಯಲ್ಲಿ ಸೀರೆಯುಟ್ಟು ಮುನ್ನಡೆಸಿದರು.

ಒಟ್ಟಿನಲ್ಲಿ ಕುದುರೆ ಸವಾರಿಯನ್ನು ವಿಶೇಷ ರೀತಿಯಲ್ಲಿ ಮಾಡುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

Edited By : Manjunath H D
Kshetra Samachara

Kshetra Samachara

08/03/2022 11:11 pm

Cinque Terre

16.29 K

Cinque Terre

0