ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಜಿರೆ: “ಗೆಳತಿ” “ಮಗಳಿಗೊಂದು ಪತ್ರ” ಕೃತಿಗಳ ಲೋಕಾರ್ಪಣೆ

ಉಜಿರೆ: ಧರ್ಮಸ್ಥಳದಲ್ಲಿಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಹೇಮಾವತಿ “ಗೆಳತಿ” ಮತ್ತು ವೀ, ಹೆಗ್ಗಡೆಯವರು ಬರೆದ ಲೇಖನಗಳ ಸಂಗ್ರಹ “ಗೆಳತಿ” “ಮಗಳಿಗೊಂದು ಪತ್ರ” ಕೃತಿಯನ್ನು ಲೋಕಾರ್ಪಣೆಯನ್ನು ಮಣಿಪಾಲದ “ತರಂಗ” ವಾರ ಪತ್ರಿಕೆ ಸಂಪಾದಕಿ ಡಾ. ಸಂಧ್ಯಾ ಪೈ ನೆರವೆರಿಸಿ ಮಾತನಾಡಿ ಸಾಹಿತ್ಯವು ಘಟದೀಪದಂತೆ ಒಳಗೆ ಬೆಳಕನ್ನು ಕೊಡುತ್ತದೆ, ಆದರೆ ಹೊರಗೆ ಕಾಣಿಸುವುದಿಲ್ಲ. ಸಾಹಿತ್ಯವೂ ಹಾಗೆ ಅಂತರಂಗದಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಪ್ರೇರಕವಾಗಿದೆ ಎಂದರು.

ಯಾವಾಗಲೂ ಲೇಖಕರು, ನಾವು ಯಾಕಾಗಿ ಬರೆಯುತ್ತೇವೆ? ಯಾರಿಗಾಗಿ ಬರೆಯುತ್ತೇವೆ? ಎಂಬುದನ್ನು ತಿಳಿದುಕೊಂಡು ಬರೆಯಬೇಕು ಎಂದು ಹೇಳಿದರು.

ಮಂಜುವಾಣಿಯಲ್ಲಿ ಪ್ರಕಟವಾಗುವ “ಮಗಳಿಗೊಂದು ಪತ್ರ” ಮತ್ತು “ನಿರಂತರ'ದಲ್ಲಿ ಪ್ರಕಟವಾಗುವ “ಗೆಳತಿ” ಅಂಕಣವನ್ನು ಎಲ್ಲರೂ ಆಸಕ್ತಿಯಿಂದ ಓದುತ್ತಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಹೇಮಾವತಿ ವೀ, ಹೆಗ್ಗಡೆ ಮಾತನಾಡಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಗ್ರಾಮಾಭಿವೃದ್ಧಿ ಯೋಜನೆಯ 25,000 ಕಾರ್ಯಕರ್ತರಲ್ಲಿ 19000 ಮಹಿಳೆಯರೇ ಇದ್ದಾರೆ ಎಂದರು. ಇದೇ ವೇಳೆ ಪರಿವರ್ತನೆಯ ಪ್ರವರ್ತಕರು” ಎಂಬ ಬಿರುದು ನೀಡಿ ಹೇಮಾವತಿ ಹೆಗ್ಗಡೆಯವರನ್ನು ಗೌರವಿಸಲಾಯಿತು.

Edited By :
Kshetra Samachara

Kshetra Samachara

08/03/2022 09:11 pm

Cinque Terre

4.09 K

Cinque Terre

0

ಸಂಬಂಧಿತ ಸುದ್ದಿ