ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟಪಾಡಿ: ಶಿವರಾತ್ರಿ ವಿಶೇಷ: ಅಹೋರಾತ್ರಿ ಕುಣಿತ,ಭಜನೆ ನೋಡುವುದೇ ಕಣ್ಣಿಗೆ ಹಬ್ಬ!

ಕಟಪಾಡಿ: ಶಿವರಾತ್ರಿಯ ಜಾಗರಣೆ ಸಮಯದಲ್ಲಿ ಭಕ್ತರು ದೇವಾಲಯಗಳಲ್ಲಿ ಸಮಯ ಕಳೆಯುತ್ತಾರೆ. ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ನೂರಾರು ಭಕ್ತರ ಕುಣಿತ, ಭಜನೆ ಅಹೋರಾತ್ರಿ ನಡೆಯಿತು. ಈ ಕುಣಿತ ಭಜನೆಯ ಒಂದು ಝಲಕ್ ಇಲ್ಲಿದೆ ನೋಡಿ...

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಶಿವರಾತ್ರಿಯ ಪ್ರಯುಕ್ತ ವಿವಿಧ ತಂಡಗಳಿಂದ ಕುಣಿತ, ಭಜನೆ ಆಯೋಜನೆ ಮಾಡಲಾಗಿತ್ತು. ಸ್ಥಳೀಯ ಐದು ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಮಕ್ಕಳಿಂದ ಹಿರಿಯರ ತನಕ ಕುಣಿತ ನೋಡುವುದೇ ಚಂದ..

ಹಬ್ಬಹರಿದಿನಗಳು ಬಂದರೆ ಸಾಕು ಊರಿಗೆ ಊರೇ ಸಂಭ್ರಮಿಸುತ್ತದೆ. ಶಿವರಾತ್ರಿಯ ಜಾಗರಣೆ ಎಂದರೆ ಜನರಿಗೆ ತೊಂದರೆ ಕೊಟ್ಟು ಸಂಭ್ರಮಿಸುವ ಕಾಲ ಹಿಂದೆ ಇತ್ತು.ಈಗ ಕಾಲ ಬದಲಾಗಿದೆ.ಆಸ್ತಿಕರು ಕುಣಿತ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

Edited By : Manjunath H D
Kshetra Samachara

Kshetra Samachara

02/03/2022 01:56 pm

Cinque Terre

3.94 K

Cinque Terre

0

ಸಂಬಂಧಿತ ಸುದ್ದಿ