ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಳ್ವಾಸ್ ಕಾಲೇಜಿನಲ್ಲಿ ಮೂರು ಕೃತಿಗಳ 'ಮನನ' ಕಾರ್ಯಕ್ರಮ

ಮೂಡುಬಿದಿರೆ: ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ‌ ವಿಭಾಗದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂರು ಕೃತಿಗಳ ಮನನ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ, ಕಥಾವಸ್ತುವೇ ಕಥೆಯಾಗಿ ರೂಪುಗೊಳ್ಳುತ್ತದೆ. ಒಬ್ಬ ಲೇಖಕ ಕಥೆಯನ್ನು ಹುಡುಕುವುದಲ್ಲ ಬದಲಿಗೆ ಕಥೆಯೇ ತನ್ನಷ್ಟಕ್ಕೆ ಸೃಷ್ಟಿಗೊಳ್ಳುತ್ತದೆ. ಸಾಮಾನ್ಯ ಜನರು ಒಂದು ಲೇಖನವನ್ನು ಅರ್ಥೈಸಿಕೊಳ್ಳವುದಕ್ಕಿಂತಲೂ, ಒಬ್ಬ ಲೇಖಕ ಅದನ್ನು ಓದಿ‌ ಮನನ ಮಾಡಿಕೊಳ್ಳುವುದಕ್ಕೂ ಬಹಳನೇ ವ್ಯತ್ಯಾಸವಿರುತ್ತದೆ. ಆಗ ಆ ಲೇಖನವು ಲೇಖಕನ ಸ್ವಾದವನ್ನು ತಿಳಿಸುತ್ತದೆ ಎಂದರು.

ಉಳ್ಳಾಲ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ‌ರಾಗಿ ಆಯ್ಕೆಯಾದ ಡಾ. ಧನಂಜಯ ಕುಂಬ್ಳೆ ಮತ್ತು ಮೂಡುಬಿದಿರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ವೇಣುಗೋಪಾಲ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಮಂಗಳೂರು ವಿವಿ ಸಹಾಯಕ ಪ್ರಧ್ಯಾಪಕ ಡಾ. ಧನಂಜಯ ಕುಂಬ್ಲೆ ಅವರು ಗೋಪಾಲಕೃಷ್ಣ ಪೈ ಅವರ 'ಸ್ವಪ್ನ ಸಾರಸ್ವತ', ರಂಗನಿರ್ದೇಶಕ ಡಾ.ದಿನಕರ ಎಸ್.ಪಚ್ಚನಾಡಿ ಅವರು ಕುಂ. ವೀರಭದ್ರಪ್ಪ ಅವರ 'ಅರಮನೆ' ಹಾಗೂ ಕತೆಗಾರ್ತಿ ಸ್ನೇಹಲತಾ ದಿವಾಕರ್ ಅವರು ರಾಘವೇಂದ್ರ ಪಾಟೀಲ ಅವರ 'ತೇರು' ಎಂಬ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿಸಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆಯನ್ನು ವಹಿಸಿದರು.

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಸಂಚಾಲಕ ಟಿ.ಎನ್.ಖಂಡಿಗೆ, ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/02/2022 10:26 pm

Cinque Terre

16.8 K

Cinque Terre

0

ಸಂಬಂಧಿತ ಸುದ್ದಿ