ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ವೃತ್ತಿಪರ ವಾಣಿಜ್ಯ ವಿಭಾಗದ ವತಿಯಿಂದ ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ತರಬೇತಿ ಹಾಗೂ ಕೇಂದ್ರ ಬಜೆಟ್ ವಿಶ್ಲೇಷಣೆ, "ಅರ್ಥಸಂಕಲ್ಪ 2022" ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಫಾರೆನ್ಸಿಕ್ ಆಡಿಟರ್ ಹಾಗೂ ಕೊಚ್ಚಿಯ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಟೆಂಟ್ಸ್ ಆಫ್ ಇಂಡಿಯಾದ ವಿಸಿಟಿಂಗ್ ಫ್ಯಾಕಲ್ಟಿ ಡಾ. ಎಸ್. ಗೋಪಾಲಕೃಷ್ಣ ಶರ್ಮ ಮಾತನಾಡಿ, ಸಿ.ಎ ಎಂಬುದು ಜವಾಬ್ದಾರಿಯುತ ವೃತ್ತಿಯಾಗಿದೆ. ಒಂದು ಕಂಪೆನಿಯ ಹಣಕಾಸಿನ ವ್ಯವಹಾರವನ್ನು ಸರಿದೂಗಿಸುವಲ್ಲಿ ಆಡಿಟರ್ ಪಾತ್ರ ಮಹತ್ವದಾಗಿದೆ. ವಿದ್ಯಾರ್ಥಿಗಳು ಎಲ್ಲಾ ರೀತಿಯ ಜ್ಞಾನವನ್ನು ಪಡೆದಾಗ ಒಬ್ಬ ಉತ್ತಮ ಸಿ.ಎ ಆಗಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೇರಳ ಹೈಕೋರ್ಟ್ ಕರ್ತವ್ಯ ನಿರತ ವಕೀಲೆ ಹೇಮಾ ಅನಂತಕೃಷ್ಣನ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನವನ್ನು ಎಲ್ಲಾ ಕಡೆಯಿಂದ ಪಡೆಯಬೇಕು. ಏಕೆಂದರೆ ವಿಶ್ವವೇ ಗುರುವಾಗಿದ್ದು, ಅನುಭವದಿಂದ ಕಲಿತ ಪಾಠ ಕೊನೆಯವರೆಗೂ ನಮ್ಮ ಜೊತೆಗಿರುತ್ತದೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ ಇದ್ದಾಗ ಉತ್ತಮ ಜ್ಞಾನ ಪಡೆಯಬಹುದು ಎಂದರು.
Kshetra Samachara
15/02/2022 02:01 pm