ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲಯನ್ಸ್ ಕ್ಲಬ್ ನಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ, ಸಾಧಕರಿಗೆ ಗೌರವ

ಮಂಗಳೂರು: ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಅವರು ನಗರದ ಕೊಡಿಯಾಲ್ ಬೈಲ್ ಕ್ಲಬ್ ಗೆ ಬುಧವಾರ ಭೇಟಿ ನೀಡಿದರು. ಈ ವೇಳೆ ಬೆಂಜನಪದವು ಎಂಬಲ್ಲಿ ಬಡಕುಟುಂಬಕ್ಕೆ ಸೇರಿದ ಮಹಿಳೆಗೆ ಮನೆ ಹಸ್ತಾಂತರ ಮತ್ತಿತರ ಸೇವಾ ಯೋಜನೆಯಲ್ಲಿ ಪಾಲ್ಗೊಂಡರು.

ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮೂವರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ನಡೆಯಿತು. ಬೆಂಜನಪದವು ನಿವಾಸಿ ಗುಲಾಬಿ ಪೂಜಾರ್ತಿ ಅವರು ಬಡಕುಟುಂಬಕ್ಕೆ ಸೇರಿದ್ದು ಅವರಿಗೆ 5 ವರ್ಷಗಳ ಹಿಂದೆ ಲಯನ್ಸ್ ಕ್ಲಬ್ ಕೊಡಿಯಾಲ್ ಬೈಲ್ 3.5 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ಶೀಟ್ ಮನೆ ನಿರ್ಮಾಣ ಮಾಡಿದ್ದು ಇಂದು 5 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸ್ವಚ್ಛತಾಕರ್ಮಿ ಬಿ.ಸಿ. ರೋಡ್ ಕುಪ್ಪಿಲ ನಿವಾಸಿ ಬಾಗಿ, ಲಲಿತಕಲಾ ಆರ್ಟ್ಸ್ ನಲ್ಲಿ 30 ವರ್ಷಗಳಿಂದಲೂ ಹೆಚ್ಚು ಪ್ರಸಾಧನ ಕಲಾವಿದರಾಗಿ ದುಡಿಯುತ್ತಿರುವ ಬಂಟ್ವಾಳ ಕುಪ್ಪೆಪದವು ನಿವಾಸಿ ಯುವರಾಜ್, ಶಕ್ತಿನಗರ ರುದ್ರಭೂಮಿ ಕಾಯುವ ಕಾಯಕ ನಡೆಸುತ್ತಿರುವ ಕುಲಶೇಖರ ನಿವಾಸಿ ಪದ್ಮನಾಭ ಅಂಚನ್ ರವರನ್ನು ಚೆಕ್ ವಿತರಿಸಿ ಗೌರವಿಸಲಾಯಿತು

ಈ ಸಂದರ್ಭ ಅಧ್ಯಕ್ಷ ಮೋಹನ್ ಕೊಪ್ಪಲ,ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಖಜಾಂಚಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ವಲಯಾಧ್ಯಕ್ಷ ವಿಜಯ್ ಶೆಟ್ಟಿ, ಕೊಡಿಯಾಲ್ ಬೈಲ್ ಕ್ಲಬ್ ಅಧ್ಯಕ್ಷ ಮೋಹನ್ ಕೊಪ್ಪಲ, ಕಾರ್ಯದರ್ಶಿ ವಿನೂತನ್, ಕೋಶಾಧಿಕಾರಿ ಲಯನ್ ಕಿಶೋರ್ ಡಿ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಗೋಕುಲ್ ಕದ್ರಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/02/2022 05:51 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ