ಉಡುಪಿ: 72ನೇ ಗಣರಾಜ್ಯೋತ್ಸವ ದಿನವಾದ ಇಂದು ದೆಹಲಿಯ ರಾಜಪಥದಲ್ಲಿ ಕರಾವಳಿಯ ಕಂಗೀಲು ನೃತ್ಯ ರಾರಾಜಿಸಿತು. ಉಡುಪಿಯ ಫೀಟ್ಸ್ ತಂಡದಿಂದ ರಾಜಪಥದಲ್ಲಿ ಕಂಗೀಲು ನೃತ್ಯ ಪ್ರದರ್ಶನಗೊಂಡಿತು.
ಗಣರಾಜ್ಯೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಉಡುಪಿಯ 14 ಮಂದಿಯ ಉತ್ಸಾಹಿ ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ಮಾಡಿದರು. ಈ ಅಪರೂಪದ ಅವಕಾಶದಿಂದಾಗಿ ಕರಾವಳಿಯ ಕಂಗೀಲು ನೃತ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಯಿತು.
Kshetra Samachara
26/01/2022 02:36 pm