ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ ,ಭಕ್ತರು ಭಾಗಿ

ಉಡುಪಿ: ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ , ಕೀರ್ತಿ ಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವವು ಪೇಜಾವರ ಮಠದಲ್ಲಿ ನಡೆಯುತ್ತಿದೆ. ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಈ ಮಹೋತ್ಸವವವು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸಿ ಸರಳವಾಗಿ ನಡೆಸಲಾಗುತ್ತಿದೆ.

ಉಡುಪಿಯ ಪೇಜಾವರ ಮಠ ಮತ್ತು ಶ್ರೀ ವಿಶ್ವೇಶತೀರ್ಥರು ಉತ್ತರದ ಬದರಿಯಿಂದ ದಕ್ಷಿಣದ ರಾಮೇಶ್ವರದವರೆಗೆ ಸಂಸ್ಥಾಪಿಸಿದ ಎಲ್ಲ ಸಂಘ ಸಂಸ್ಥೆಗಳು ಹಾಗೂ ಮಠದ ಶಾಖೆಗಳಲ್ಲೂ ಆರಾಧನೆಯ ನಿಮಿತ್ತ ಧಾರ್ಮಿಕ ವಿಧಿಗಳಿಗೆ ಸೀಮಿತಗೊಳಿಸಿ ಗುರು ಸ್ಮರಣೆ ನಡೆಯುತ್ತಿದೆ.

Edited By : Manjunath H D
PublicNext

PublicNext

05/01/2022 02:37 pm

Cinque Terre

31.9 K

Cinque Terre

2

ಸಂಬಂಧಿತ ಸುದ್ದಿ