ಮುಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಆದರ್ಶ ಬಳಗ ವತಿಯಿಂದ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಕೊಡೆತ್ತೂರು ಗ್ರಾಮಸ್ಥರಿಗಾಗಿ ಕೆಸರುಗದ್ದೆ ಕ್ರೀಡೋತ್ಸವ ಕೊಡೆತ್ತೂರುಬೈಲಿನಲ್ಲಿಇಂದು ನಡೆಯಿತು.
ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇದವ್ಯಾಸ ಉಡುಪ ಮಾತನಾಡಿದರು.
ಜಯರಾಮ ಶೆಟ್ಟಿ, ಸುಧಾಕರ ಶೆಟ್ಟಿ ಅಡ್ಡಣಗುತ್ತು, ಜಯ ಕರ್ಕೇರ, ಪ್ರಕಾಶ್ ಶೆಟ್ಟಿ, ಚಂದ್ರಹಾಸ್, ಸಂಸ್ಥೆ ಅಧ್ಯಕ್ಷ ನಾಗರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಕೆಸರಿನ ಅಂಗಣದಲ್ಲಿ ನಡೆದ ವಿವಿಧ ರೀತಿಯ ಸ್ಪರ್ಧೆಗಳಲ್ಲಿ
Kshetra Samachara
02/01/2022 06:10 pm