ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಡಪದವು: "ಹಾಜಬ್ಬರಂತೆ ನಾವು ಕೂಡ ನಮ್ಮೂರಿನ ಶಾಲೆಯ ಅಭಿವೃದ್ಧಿಗೆ ಶ್ರಮಿಸೋಣ"

ಬಜಪೆ: ಸಮಾಜಮುಖಿ ಕಾರ್ಯ ಮಾಡಿದವರ, ಒಳ್ಳೆಯ ವ್ಯಕ್ತಿತ್ವದ, ದೇಶಭಕ್ತಿ ಹೊಂದಿರುವವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವ ಮೂಲಕ ಅವರ ಸಾಧನೆಗೆ ಪ್ರಧಾನಿ, ರಾಷ್ಟ್ರಪತಿ, ಇಡೀ ಆಡಳಿತ ವ್ಯವಸ್ಥೆಯೇ ತಲೆಬಾಗುತ್ತದೆ. ಜಾತಿ, ಮತ, ಪಂಥ ಮೀರಿ ಹರೇಕಳ ಹಾಜಬ್ಬನವರಿಗೆ ಪದ್ಮಶ್ರೀ ದೊರಕಿರುವುದು ಇದಕ್ಕೆ ಸಾಕ್ಷಿ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಅವರು ಇಂದು ಎಡಪದವು ಗ್ರಾಪಂ ವತಿಯಿಂದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬನವರನ್ನು ಸನ್ಮಾನಿಸಿ ಮಾತನಾಡಿದರು. ‌ಹಾಜಬ್ಬನವರು ತಮ್ಮ ಊರಿನ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದಂತೆ ನಾವು ಕೂಡ ನಮ್ಮ ಊರಿನ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರೆ ಅದು ಅವರಿಗೂ ಕೊಡುವ ಗೌರವ ಎಂದು ಶಾಸಕರು ಹೇಳಿದರು.

ಈ ಸಂದರ್ಭ ಎಡಪದವು ಗ್ರಾಪಂನಲ್ಲಿ ಘನತ್ಯಾಜ್ಯ ಘಟಕದ ವಾಹನದ ಚಾಲನೆ, ಮೂವರು ನಾಗರಿಕರಿಗೆ 94 ಸಿಸಿ ಹಕ್ಕುಪತ್ರ ವಿತರಣೆ, ಶೇ. 25 ಅನುದಾನದಲ್ಲಿ 18 ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ವಿತರಣೆ ಹಾಗೂ 4 ಮಂದಿ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ ಶಾಸಕರು ನೆರವೇರಿಸಿದರು. ಎಡಪದವು ಗ್ರಾಪಂ ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಪ್ರೇಮಾ, ಪಿಡಿಒ ರಾಜೀವಿ ಡಿ.ನಾಯ್ಕ್, ಪಂ. ಸದಸ್ಯರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/01/2022 06:25 pm

Cinque Terre

6.69 K

Cinque Terre

0

ಸಂಬಂಧಿತ ಸುದ್ದಿ