ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೃಷ್ಣಮಠ ವಿಶ್ವಾರ್ಪಣಮ್ ಸಮಾರಂಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನ

ಉಡುಪಿ : ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಿದರು.

ಮೂಡಬಿದರೆಯ ಡಾ.ಪದ್ಮನಾಭ ಉಡುಪ, ನೇತ್ರತಜ್ಞ ಡಾ.ಕೃಷ್ಣಪ್ರಸಾದ್, ವಿದ್ವಾಂಸ ಎಂ.ನಾರಾಯಣ ಮೂಡಬಿದರೆ,ಮಂಡ್ಯದ ವೈದ್ಯ,ಸಮಾಜ ಸೇವಕ ಡಾ.ಎಸ್.ಎ.ಶಂಕರೇಗೌಡ ಮೊದಲಾದವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು ,ಎಲ್ಲವನ್ನು ಕಳಕೊಂಡು ಬೀದಿಪಾಲಾದರೂ ಭಗವಂತ ನಮಗೆ ಪರ್ಯಾಯ ವ್ಯವಸ್ಥೆಯನ್ನು ಖಂಡಿತ ಒದಗಿಸಿರುತ್ತಾನೆ, ಅದನ್ನು ನಾವು ಕಂಡುಕೊಳ್ಳಬೇಕು ಎಂದು ಅನುಗ್ರಹಿಸಿದರು.

ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹಿಸಿದರು.

ಬೆಂಗಳೂರಿನ ವಕೀಲರಾದ ಸಿ.ಎ ಹರಿಕುತ್ಸ “ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಪರಿಸ್ಥಿತಿ” ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ವೋಚ್ಚ ನ್ಯಾಯಾಲಯದ ವಕೀಲರೂ,ಲೇಖಕರೂ ಆದ ಸಾಯಿ ದೀಪಕ್ ಅವರು “ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂ ಧರ್ಮದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಭ್ಯಾಗತರಾಗಿ ಕಟೀಲಿನ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ,ಮೈಸೂರಿನ ಡಾ.ಅನಿಲ್ ಸಾಂಗ್ಲಿ,ಮೈಸೂರಿನ ವಕೀಲರಾದ ಶ್ರೀಪಾದ ಸಾಂಗ್ಲಿ ಭಾಗವಹಿಸಿದ್ದರು.

Edited By : Shivu K
Kshetra Samachara

Kshetra Samachara

20/12/2021 02:36 pm

Cinque Terre

3.15 K

Cinque Terre

0

ಸಂಬಂಧಿತ ಸುದ್ದಿ