ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಗೆ ಅರುವ ಕೊರಗಪ್ಪ ಶೆಟ್ಟಿ ಆಯ್ಕೆ

ಮುಲ್ಕಿ:ಬಂಟರಸಂಘ (ರಿ) ಮುಲ್ಕಿ ಮತ್ತು ಮುಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ ಮುಲ್ಕಿ ಸುಂದರ ರಾಮ ಶೆಟ್ಟಿ ಪ್ರಶಸ್ತಿಗೆ ಈ ಬಾರಿ ಯಕ್ಷರಂಗದ ಖ್ಯಾತ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ

ಅರುವ ಕೊರಗಪ್ಪ ಶೆಟ್ಟಿಯವರು ಕಳೆದ 63 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಡಿದ್ದಾರೆ,

ಕಟೀಲು, ಕುತ್ಯಾಳ ಮೇಳ, ಕೂಡ್ಲು ಮೇಳ, ಕುಂಡಾವು ಮೇಳ, ಕರ್ನಾಟಕ ಮೇಳ, ಮಂಗಳಾದೇವಿ ಮೇಳ, ಎಡನೀರು ಮೇಳ, ಕದ್ರಿ ಮೇಳ, ಬಪ್ಪನಾಡು ಮತ್ತಿತರ ಮೇಳಗಳಲ್ಲಿ ಒಟ್ಟು ಸುಮಾರು 63 ವರ್ಷಗಳಲ್ಲಿ ಕಲಾ ಸೇವೆಗೈದಿದ್ದಾರೆ, ಒಟ್ಟು ಸುಮಾರು 400ಕ್ಕಿಂತಲೂ ಅಧಿಕ ಸನ್ಮಾನಗಳನ್ನು ಪಡೆದ ಹೆಗ್ಗಳಿಕೆ ಇವರಿಗಿದೆ.

ಕರ್ನಾಟಕ ರಾಜ್ಯ ಪ್ರಶಸ್ತಿ, ಪೇಜಾವರ ಪ್ರಶಸ್ತಿ, ಎಡನೀರು ಪ್ರಶಸ್ತಿ, ಒಡಿಯೂರು ಪ್ರಶಸ್ತಿ, ಮಣಿಲ ಪ್ರಶಸ್ತಿ, ರೋಟರಿ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ ಮೊದಲಾದುವುಗಳು. ಲಭಿಸಿದ್ದು, ರಂಗಸ್ಥಳದ ರಾಜ, ಅಭಿನಯ ಭಾರ್ಗವ, ರಂಗಶಿಲ್ಪಿ ಮತ್ತಿತರ ಬಿರುದುಗಳು ಸಿಕ್ಕಿದೆ.

ಪ್ರಶಸ್ತಿ ಪ್ರಧಾನ ಸಮಾರಂಭ ಡಿಸೆಂಬರ್ 19 ರಂದು ಮುಲ್ಕಿ ಬಂಟರ ಸಂಘದ ಹೆಜಮಾಡಿ ಬಾಲಕೃಷ್ಣ ಶೆಟ್ಟಿ ಸಭಾಗೃಹದಲ್ಲಿ ನಡೆಯಲಿದೆ ಎಂದು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

15/12/2021 05:59 pm

Cinque Terre

4.09 K

Cinque Terre

1

ಸಂಬಂಧಿತ ಸುದ್ದಿ