ಉಡುಪಿ: ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ 'ವಿಶ್ವಾರ್ಪಣಮ್' ಸಮಾರಂಭ ನಡೆಯುತ್ತಿದೆ.ಈ ಪ್ರಯುಕ್ತ ವೈವಿಧ್ಯಮಯ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು ಮಠದ ರಾಜಾಂಗಣದಲ್ಲಿ ನಡೆಯುತ್ತಿವೆ.ಮೂರನೇ ದಿನ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಮಠದ ಶಿಕ್ಷಣ ಸಂಸ್ಥೆಗಳ ಹಣಕಾಸು ಸಲಹೆಗಾರರಾದ ಪಿ.ಶ್ರೀನಿವಾಸ ರಾವ್, ಶ್ರೀಕೃಷ್ಣ ಮಠದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸುತ್ತಿರುವ ಕೋಟೇಶ್ವರ ಕೆ.ಆರ್.ಪ್ರಸಾದ ಕಲ್ಕೂರ ಮತ್ತು ಅಂಚೆ ಪೇದೆಯಾಗಿರುವ ನರಸಿಂಹ ನಾಯಕ್ ರನ್ನು ಸನ್ಮಾನಿಸಿ ಗೌರವಿಸಿದರು .ಜೀವನದಲ್ಲಿ ಪ್ರಯತ್ನವೆಂಬ ಮಥನವನ್ನು ನಡೆಸಿದಾಗ ಮಾತ್ರ ಸಾಧನೆಯೆಂಬ ಅಮೃತತ್ವವನ್ನು ಪಡೆಯಲು ಸಾಧ್ಯ ಎಂದು ಎಲ್ಲರೂ ತಿಳಿಯಬೇಕು ಎಂದು ಅನುಗ್ರಹಿಸಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಎಲ್ಲರೂ ಸಮಾನತೆಯನ್ನು ಸಾಧಿಸಬೇಕು ಎಂದು ಹರಸಿದರು.ಅಂಕಣಕಾರ ರೋಹಿತ್ ಚಕ್ರತೀರ್ಥ ,"ಶಿಕ್ಷಣ ವಿಮರ್ಶೆ,ಮಕ್ಕಳಿಗೆ ಇಂತಹ ಶಿಕ್ಷಣ ಬೇಕು"ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು.ಅಭ್ಯಾಗತರಾಗಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿಪ್ರಸಾದ ಅಸ್ರಣ್ಣ ಪಾಲ್ಗೊಂಡಿದ್ದರು.ಇದೇ ವೇಳೆ ನಡೆದ ಯಕ್ಷಗಾನ ಪ್ರಸಂಗವು ನೆರೆದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
Kshetra Samachara
08/12/2021 11:42 am