ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕೊಡೇರಿಯಲ್ಲಿ 'ಏಕಲವ್ಯ ಕಂಬಳೋತ್ಸವ' ಸಮಾಪನ

ಬೈಂದೂರು: ಕರಾವಳಿ ಗದ್ದೆಗಳಲ್ಲಿ ಕಂಬಳ ಕಲರವ ಆರಂಭಗೊಂಡಿದೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲ ಕಂಬಳ ಬೈಂದೂರು ತಾಲೂಕಿನ ಕೊಡೇರಿ ಗ್ರಾಮದ ಪಟೇಲರ ಮನೆ ಕಂಬಳಗದ್ದೆಯಲ್ಲಿ ಜರುಗಿತು.

ಏಕಲವ್ಯ ಕಂಬಳ ಸಮಿತಿ ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದೊಂದಿಗೆ ವೈಭವದ ಕಂಬಳೋತ್ಸವ ಆಯೋಜಿಸಿತ್ತು. 50ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿತ್ತು. ಹಲವಾರು ವರ್ಷಗಳಿಂದ ಪಟೇಲರ ಮನೆಯವರು ಕಂಬಳೋತ್ಸವ ನಡೆಸಿಕೊಂಡು ಬಂದಿದ್ದು, ಕಾರಣಾಂತರಗಳಿಂದ ಈ ಆಚರಣೆ ನಿಂತು ಹೋಗಿತ್ತು. ಇದನ್ನು ಮನಗಂಡ ಈ ಭಾಗದ ಕೆಲವು ಯುವಕರು ಸೇರಿಕೊಂಡು ಏಕಲವ್ಯ ಸಮಿತಿ ರಚಿಸಿ, ಕಂಬಳ ಮುನ್ನಡೆಸುತ್ತಿದ್ದಾರೆ.

ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ ಕಂಬಳೋತ್ಸವಕ್ಕೆ ಚಾಲನೆ ನೀಡಿದರು. ತಾಲೂಕು ಕಂಬಳ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಭಟ್, ಶಿಕ್ಷಕ ಸತ್ಯನಾ ಕೊಡೇರಿ ಹಾಗೂ ಪಟೇಲ ಮನೆ ಸದಸ್ಯರು ಈ ಸಂದರ್ಭ ಹಾಜರಿದ್ದರು.

Edited By : Manjunath H D
Kshetra Samachara

Kshetra Samachara

15/11/2021 05:02 pm

Cinque Terre

7.62 K

Cinque Terre

0

ಸಂಬಂಧಿತ ಸುದ್ದಿ