ಕಟೀಲು: "ಶಾಲೆ ಮಾಡಲು ಪ್ರೇರಣೆ ಏನು? ಎಷ್ಟೆಲ್ಲ ಕಷ್ಟ ಪಟ್ಟಿರಿ, ಪದ್ಮಶ್ರೀ ಪಡೆದಾಗ ಹೇಗನಿಸಿತು" ಎಂದು ಪದ್ಮಶ್ರೀ ಹರೇಕಳ ಹಾಜಬ್ಬರನ್ನು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಕಟೀಲು ನುಡಿಹಬ್ಬದಲ್ಲಿ ಸಾಧಕರ ಜೊತೆಗಿನ ಸಂವಾದದಲ್ಲಿ ಮಕ್ಕಳ ಕೇಳಿದ ಪ್ರಶ್ನೆಗಳಿಗೆ ಮುಗ್ದತೆಯಿಂದಲೇ ಉತ್ತರಿಸಿದ ಹಾಜಬ್ಬ ತನಗೆ ಸಹಕರಿಸಿದವರ ಹೆಸರುಗಳನ್ನು ಹೇಳುತ್ತಲೇ ಹೋದರು.
ಮತ್ತೋರ್ವ ಸಾಧಕ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರಿಗೂ ವಿದ್ಯಾರ್ಥಿಗಳು, 'ನಿಮ್ಮ ಸಾಹಿತ್ಯ ಕೊಡುಗೆಗಳಿಗೆ ಪ್ರೇರಣೆ ಏನು? ನೂರು ಮನೆಕಟ್ಟಲು ಕಾರಣವೇನು? ಪರಿಷತ್ ಅಧ್ಯಕ್ಷರಾಗಿ ಅನುಭವ ಏನು? ಎಂಬ ಪ್ರಶ್ನೆಗಳನ್ನು ಕೇಳಿದರು. ಪುನರೂರು ಅವರು ಕೂಡ ಮಕ್ಕಳ ಮುದ್ದು ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ಹರಿಕೃಷ್ಣ ಪುನರೂರು ಅವರು, "ಕನ್ನಡ ಹಾಗೂ ತುಳು ಎರಡೂ ನಮ್ಮ ಕಣ್ಣುಗಳಿದ್ದಂತೆ. ಎರಡನ್ನೂ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಮಕ್ಕಳು ಇದಕ್ಕೆ ಮುಂದಾಗಬೇಕು" ಎಂದು ಕರೆಕೊಟ್ಟರು.
ಪತ್ರಕರ್ತ ಗುರುವಪ್ಪ ಬಾಳೇಪುಣಿ ಮಾತನಾಡಿ, ಹಾಜಬ್ಬ ಅವರಿಗೆ ಎಷ್ಟೇ ಪ್ರಶಸ್ತಿಗಳು ಬಂದರೂ ಅವರು ಬದಲಾಗುವುದಿಲ್ಲ. ಪುನರೂರು ನೂರಾರು ಯುವ ಸಾಹಿತಿಗಳ ಪುಸ್ತಕಗಳ ಪ್ರಕಾಶನಕ್ಕೆ ಪ್ರೋತ್ಸಾಹಿಸಿದವರು. ಇಬ್ಬರೂ ಸರಳತೆಯಿಂದ ಕಾರ್ಯದಿಂದ ಶ್ರೇಷ್ಟರು ಎಂದರು. ಸಮ್ಮೇಳನಾಧ್ಯಕ್ಷ ಶ್ರೀಧರ ಡಿಎಸ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
14/11/2021 09:01 pm