ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ಉಡುಪಿ ಜಿಲ್ಲಾ ಮಹಾಸಭೆಯು ಉಡುಪಿಯ ದೊಡ್ಡಣಗುಡ್ಡೆ ಮದ್ರಸಾ ಹಾಲ್‌ನಲ್ಲಿ ನಡೆಯಿತು.ರಾಜ್ಯ ಸಮಿತಿ ಸದಸ್ಯ ಹಾಗೂ ಉಡುಪಿ ಜಿಲ್ಲಾ ವೀಕ್ಷಕ ಕೆಕೆಎಂ ಕಾಮಿಲ್ ಸಖಾಫಿ ಪುನಾರಚನೆಗೆ ನೇತೃತ್ವ ನೀಡಿದರು.
ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಕೋಶಾಧಿಕಾರಿ ಅಬ್ದುಲ್ ಹಕೀಮ್ ಕೊಡ್ಲಿಪೇಟೆ , ರಾಜ್ಯ ಕಾರ್ಯದರ್ಶಿ ಸಯ್ಯಿದ್ ಜಅಫರ್ ಸಖಾಫ್ ಕೋಟೇಶ್ವರ ಉಪಸ್ಥಿತರಿದ್ದರು.
ನೂತನ ಸಮಿತಿಗೆ ಕೆಳಗಿನವರನ್ನು ಆರಿಸಲಾಯಿತು.ಅಡ್ವಕೇಟ್ ಹಂಝತ್ ಉಡುಪಿ (ಅಧ್ಯಕ್ಷರು) ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ (ಪ್ರಧಾನ ಕಾರ್ಯದರ್ಶಿ) ಹಾಜಿ ಕೆ. ಮೊಯ್ದೀನ್ ಗುಡ್ವಿಲ್ ಕಾಪು (ಕೋಶಾಧಿಕಾರಿ) ಅಬ್ದುಲ್ಲಾ ಸೂಪರ್ ಸ್ಟಾರ್ (ಉಪಾಧ್ಯಕ್ಷರು)*
ಕಾರ್ಯದರ್ಶಿಗಳಾಗಿ:- ಹೈದರ್ ಅಲಿ ಅಹ್‌ಸನಿ ಮೂಳೂರು (ದಅ್‌ವಾ) ಅಬ್ದುಲ್ ರಝಾಖ್ ಮುಸ್ಲಿಯಾರ್ ಸಾಸ್ತಾನ (ಸಂಘಟನೆ) ಪಿ.ಪಿ.ಬಶೀರ್ ಮಜೂರು (ಇಸಾಬಾ) ಬಿ.ಕೆ. ಅಬೂಬಕರ್ ಮುಸ್ಲಿಯಾರ್ ಕನ್ನಂಗಾರ್ (ಕಲ್ಚರಲ್) ಅಡ್ವಕೇಟ್ ಇಲ್‌ಯಾಸ್ ನಾವುಂದ (ಸೋಷಿಯಲ್) ಮುಸ್ತಫಾ ಬಂಗ್ಳೆಗುಡ್ಡೆ, ಕಾರ್ಕಳ (ಮೀಡಿಯಾ) ಸಿದ್ದೀಖ್ ಮಾಸ್ಟರ್ ಕುಂದಾಪುರ (ಡೈರೆಕ್ಟರ್ ಇಸಾಬಾ)*
ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಜಅಫರ್ ಸಖಾಫ್ ತಂಙಳ್ ,ಕೆ.ಹುಸೈನ್ ಕೋಟ ಪಡುಕೆರೆ ,ಅಬ್ದುಲ್ಲಾ ಅಹ್ಮದ್ ಮೂಳೂರು,ಹನೀಫ್ ಹಾಜಿ ಕನ್ನಂಗಾರ್ ,ಸಯ್ಯಿದ್ ಅಲಿ ಪಡುಬಿದ್ರೆ ,ಹಾಫಿಲ್ ಅಬ್ದುಲ್ಲತೀಫ್ ಫಾಳಿಲ್ ನಾವುಂದ,ರಮಳಾನ್ ನಾವುಂದ,ಎಚ್. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕಾರ್ಕಳ,ಇಬ್ರಾಹಿಂ ಮಣಿಕೊಳಲು,ಸಿ.ಎಚ್.ಹಮೀದ್ ಮುಸ್ಲಿಯಾರ್ ಕಾರ್ಕಳ, ಶಾಬಾನ್ ಹಾಜಿ ಉಡುಪಿ ಇವರನ್ನು ಆರಿಸಲಾಯಿತು.
ಸಮಾವೇಶದಲ್ಲಿ ಹಾಜಿ ಕೆ. ಮೊಯ್ದೀನ್ ಗುಡ್‌ವಿಲ್ ಅಧ್ಯಕ್ಷತೆ ವಹಿಸಿದರು,ಸಯ್ಯಿದ್ ಜಅಫರ್ ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಿದರು. ಹಂಝತ್ ಉಡುಪಿ ಸ್ವಾಗತಿಸಿ ಅಬ್ದುಲ್ ರಹ್ಮಾನ್ ರಝ್ವಿ ಧನ್ಯವಾದ ಸಲ್ಲಿಸಿದರು.
Kshetra Samachara
11/11/2021 05:14 pm