ಉಡುಪಿ: ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಯಾಗ ನಡೆಯುತ್ತಿದೆ. ಸೋಮವಾರದ ಶುಭದಿನವಾದ ಇಂದು, ಈಶ್ವರ ದೇವರ ಸನ್ನಿಧಾನದಲ್ಲಿ ಅಪರೂಪದ ರುದ್ರಯಾಗ ಏರ್ಪಾಟಾಗಿದೆ.
ಕ್ಷೇತ್ರದ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಮಹಾಯಾಗ ಆಯೋಜಿತವಾಗಿದೆ. ಈ ಮಹಾಯಾಗದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದಾರೆ. ಪ್ರತಿಯೊಬ್ಬ ಭಕ್ತರಿಗೂ ಸಂಕಲ್ಪ ಸಹಿತ ರುದ್ರಯಾಗ ಸೇವೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಲೋಕಕಲ್ಯಾಣಾರ್ಥ ಮಹಾಯಾಗ ನಡೆಯುತ್ತಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ.
Kshetra Samachara
08/11/2021 12:21 pm