ಬಜಪೆ : ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ವತಿಯಿಂದ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. 3ರಿಂದ 5 ರವರೆಗೆ ಆಯೋಜಿಸಲಾದ `ಹಣತೆ ದೀಪ' ಬೆಳಕಿನ ಹಬ್ಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಚಾಲನೆ ನೀಡಿದರು.ಪೊಳಲಿ ದೇವಸ್ಥಾನದ ಅರ್ಚಕ ಅನಂತ ಭಟ್ ಪ್ರಾರ್ಥಿಸಿ ಶುಭ ಹಾರೈಸಿದರು.
ಕಳೆದ ವರ್ಷದಿಂದ ದೀಪಾವಳಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಈ ಸಂಘಟನೆಗಳು ಹಣತೆ ದೀಪ ಹಚ್ಚುವ ಕಾರ್ಯಕ್ರಮ ನಡೆಸುತ್ತಾ ಬಂದಿವೆ. ಈ ಬಾರಿ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿ 115೦ ಹಣತೆ ದೀಪಗಳನ್ನು 45 ಲೀಟರ್ ತುಪ್ಪದಿಂದ ಪ್ರಜ್ವಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ, ರಾಜರಾಮ್ ಭಟ್, ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ ಎಸ್, ಶುಭ ಬೀಡಿ ಮಾಲಕ ಭುವನೇಶ್ ಪಚ್ಚಿನಡ್ಕ, ವಿಜಯ್ ಬೆಂಜನಪದವು,ಸ0ತೋಷ್ ಪೊಳಲಿ,ಜಯಪ್ರಕಾಶ್, ಕಿರಣ್ ಕುಮಾರ್, ವಿಜೇಶ್ ನಾಯ್ಕ್, ಸುನಿಲ್ ಪೊಳಲಿ, ವೆಂಕಟೇಶ್ ನಾಡವ, ಸಂಘಟನೆಯ ಪ್ರಮುಖರು ಹಾಗೂ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
04/11/2021 09:48 pm