ಕಾರ್ಕಳ: ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಉಮಿಕಲ್ ಕುಂಜ ಪರಶುರಾಮ ಬೆಟ್ಟದ ಮೇಲೂ ಕನ್ನಡದ ಹಾಡುಗಳನ್ನು ಹಾಡಲಾಯಿತು.
ಶಾಂತಿ ಯುವಕ ವೃಂದ ಜಾರ್ಕಳ ಮತ್ತು ಲಯನ್ಸ್ ಕ್ಲಬ್ ಬೈಲೂರು ಸಂಘಟನೆಯ ಸದಸ್ಯರು ಈ ಅಭಿಯಾನದಲ್ಲಿ ಪಾಲ್ಗೊಂಡು, 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ.. ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ...' ಹಾಡನ್ನು ಹಾಡಿದರು.
ಡ್ರೋನ್ ಕ್ಯಾಮೆರಾ ಮೂಲಕ ಕರುನಾಡ ಹಾಡಿನ ಮಾಧುರ್ಯದ ಜೊತೆ ಬೆಟ್ಟದ ಸೌಂದರ್ಯವನ್ನೂ ಕಟ್ಟಿ ಕೊಡಲಾಯ್ತು.
Kshetra Samachara
28/10/2021 08:46 pm