ಮೂಲ್ಕಿ: ಸಹೃದಯರು ಶಾಂತ ಚಿತ್ತರಾಗಿ ಪ್ರಾಮಾಣಿಕ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ಬಿ.ಆರ್ ಭಟ್ರವರು ನಿಗಮದ ಸಿಬ್ಬಂದಿಗಳಿಗೆ ಮಾದರಿಯಾಗಿದ್ದಾರೆ ಎಂದು ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖಾಧಿಕಾರಿ ದುರ್ಗಾ ರಾಮ ಶಣೈ ಹೇಳಿದರು.
ಮೂಲ್ಕಿ ಶಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಖೆಯ ಆಡಳಿತಾಧಿಕಾರಿಯಾಗಿ ನಿವೃತ್ತಿಹೊಂದಿದ ಬಿ.ರಾಘವೇಂದ್ರ ಭಟ್ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಿ ಮಾತುಗಳನ್ನಾಡಿದರು.
ಈ ಸಂದರ್ಭ ಶಾಖೆಯ ಸಿಬ್ಬಂದಿಗಳಾದ ಮಹೇಶ್ ಶೆಟ್ಟಿ, ಭಾಸ್ಕರ್ ಎಸ್, ಪೂರ್ಣೇಶ್ ಸನ್ಮಾನಿತರನ್ನು ಅಭಿನಂದಿಸಿದರು.
ಅಭಿವೃದ್ಧಿ ಅಧಿಕಾರಿ ಪೂರ್ಣೇಶ್ ಸ್ವಾಗತಿಸಿದರು. ಉಪಶಾಖಾಧಿಕಾರಿ ಸೋಮಸುಂದರ್ ವಂದಿಸಿದರು. ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.
Kshetra Samachara
22/10/2021 03:38 pm