ಬಜಪೆ:ಜಾಗತಿಕ ಬಂಟರ ಸಂಘದ ವತಿಯಿಂದ ಸುಮಾರು 150 ಬಡ ಕುಟುಂಬಗಳಿಗೆ ಮನೆ ಕಟ್ಟಿ ಕೊಡಲಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಣ ಐಕಳ ಹರೀಶ್ ಶೆಟ್ಟಿ ಹೇಳಿದರು ಅವರು ಬಂಟರ ಸಂಘ (ರಿ) ನಿಡ್ಡೋಡಿ ಕಲ್ಲಮುಂಡ್ಕೂರು ಇದರ 31 ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಕೊರೋನಾ ಸಂದರ್ಭ ಸುಮಾರು 1.50 ಕೋಟಿ ರೂಪಾಯಿ ಬಡ ಕುಟುಂಬಗಳಿಗೆ ವ್ಯಯಿಸಲಾಗಿದ್ದು, ಸಮಾಜಿಕ ಕಾರ್ಯಗಳು ನಿರಂತರ ಮುಂದುವರಿಯಲಿದೆ ಎಂದರು. ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಯದುನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸಮೀಕ್ಷ ಶೆಟ್ಟಿ ಮುದಲಾಡಿ, ಅಮೀತಾ ಶೆಟ್ಟಿ, ಮುದಲಾಡಿ, ಮೇಘನಾ ಶೆಟ್ಟಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಿರಣ್ ಶೆಟ್ಟಿ, ದೀಕ್ಷಾ ಶೆಟ್ಟಿ, ಹರ್ಷದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಸತ್ಯನಾರಾಯಣ ಶಾಲೆ ನಿಡ್ಡೂಡಿ ಇಲ್ಲಿನ ಆಡಳಿತ ಅಧಿಕಾರಿ ಯದುನಾರಾಯಣ ಶೆಟ್ಟಿ, ಬಾಪೂಜಿ ಶಾಲೆಯ ಸಂಚಾಲಕಿ ಉಷಾ ಕಿರಣ್ ಅಳ್ವ, ವಿದ್ಯಾ ಎನ್ ರೈ ಬೋಂಟಲ್ಕೆ, ಲಯನ್ಸ್ ಕ್ಲಬ್ ನ ಗಣೇಶ್ ಶೆಟ್ಟಿ ಮುಚ್ಚೂರು, ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮುದಲಾಡಿ, ಗರವಾಧ್ಯಕ್ಷ ಬಿ.ಆರ್. ಪ್ರಸಾದ್ ಮತ್ತಿತರಿದ್ದರು, ಬಂಟರ ಸಂಘದ ಅಧ್ಯಕ್ಷೆ ಶಾಂಭವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅವಿನಾಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರದೀಪ್ ಸ್ವಾಗತಿಸಿ, ದೇವಿದಾಸ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಅಮರ್ ಪ್ರಸಾದ್ ಶೆಟ್ಟಿ ನಿರೂಪಿಸಿದರು.
Kshetra Samachara
20/10/2021 06:11 pm