ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಆಹಾರ ಜಾಗೃತಿ ಅಭಿಯಾನ; ಸಾಧಕ ಕೃಷಿಕರಿಗೆ ಗೌರವ

ಮುಲ್ಕಿ: ಪುನರೂರು ಪ್ರತಿಷ್ಠಾನ (ರಿ) ಆಶ್ರಯದಲ್ಲಿ ಮುಲ್ಕಿ ಜನವಿಕಾಸ ಸಮಿತಿ ಸಹಕಾರದಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಆಹಾರದ ಅಪವ್ಯಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಹಾರ ಜಾಗೃತಿ ಅಭಿಯಾನ 2021 ಹಾಗೂ ಆಹಾರ ಪೂರೈಸುವ ರೈತನ ಪ್ರಾಮುಖ್ಯತೆಯನ್ನು ತಿಳಿಸುವುದರೊಂದಿಗೆ ದೇಶದ ಬೆನ್ನೆಲುಬಾಗಿರುವ ಪ್ರಗತಿಪರ ಕೃಷಿಕರನ್ನು ಗೌರವಿಸುವ ಕಾರ್ಯಕ್ರಮ ಮುಲ್ಕಿ ಸಮೀಪದ ಕೆಂಚನಕೆರೆ "ಪ್ರಕೃತಿ" ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಹಾರದ ಬೆಲೆಯನ್ನು ಅರಿತುಕೊಂಡು ಕೃಷಿಕರಿಗೆ ಪ್ರೋತ್ಸಾಹ ನೀಡಿ ಗೌರವಿಸುವ ಕೆಲಸ ಶ್ಲಾಘನೀಯ ಎಂದರು

ಕಟೀಲು ಕ್ಷೇತ್ರದ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ದಾ ಡಿಸೋಜ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು,ಜನ ವಿಕಾಸ ಸಮಿತಿ ಅಧ್ಯಕ್ಷ ಪ್ರಾಣೇಶ್ ಭಟ್ ದೇಂದಡ್ಕ, ಕೃಷಿ ಅಧಿಕಾರಿ ಅಬ್ದುಲ್ ಬಶೀರ್, ಮುರಳಿದರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ, ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕೆನ್ಯೂಟ್ ಅರಾಹ್ನ ಕೆಂಚನಕೆರೆ ರವರಿಗೆ "ಕೃಷಿ ರತ್ನ 2021" ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿತೇಂದ್ರ ವಿ ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ದಾಮೋದರ ಶೆಟ್ಟಿ ಕೊಡೆತ್ತೂರು ಧನ್ಯವಾದ ಅರ್ಪಿಸಿದರು

Edited By : Nagesh Gaonkar
Kshetra Samachara

Kshetra Samachara

16/10/2021 07:13 pm

Cinque Terre

29.34 K

Cinque Terre

0

ಸಂಬಂಧಿತ ಸುದ್ದಿ