ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಡಾ.ಪ್ರಭಾಚಂದ್ರ ಜೈನ್ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ವಮಿತಿ ವತಿಯಿಂದ ಬುಧವಾರ ಸಂಜೆ ಸಮಾರೋಪಗೊಂಡ ಮೂರನೇ ವರ್ಷದ ಶಾರದೋತ್ಸವ ಶೋಭಾಯಾತ್ರೆ ಸರಳ ರೀತಿಯಲ್ಲಿ ನೆರವೇರಿತು. ಆ ಬಳಿಕ ಪುಚ್ಚಮೊಗರು ಫಲ್ಗುಣಿ ನದಿಯಲ್ಲಿ ಶಾರದಾ ವಿಗ್ರಹ ವಿಸರ್ಜಿಸಲಾಯಿತು. ಸಮಿತಿ ಅಧ್ಯಕ್ಷ ಹರೀಶ ಡಿ.ಪೂಜಾರಿ, ಪ್ರಮುಖರಾದ ಬೇಬಿ ಕುಂದರ್, ಲೋಕೇಶ ಶೆಟ್ಟಿ, ಉಮೇಶ ಶೆಟ್ಟಿ, ಜಗದೀಶ ಕೊಯಿಲ, ಗಣೇಶ ನಾಯಕ್, ಉಮೇಶ ಶೆಟ್ಟಿ, ಶಿವಾನಂದ ರೈ, ದಿನೇಶ ಶೆಟ್ಟಿಗಾರ್, ಅಶೋಕ ಆಚಾರ್ಯ, ಸೀತಾರಾಮ ಶಾಂತಿ, ದಿನೇಶ ಸುಂದರ ಶಾಂತಿ ಮತ್ತಿತರರು ಪಾಲ್ಗೊಂಡಿದ್ದರು.
Kshetra Samachara
16/10/2021 04:58 pm