ಕಾರ್ಕಳ: ನವರಾತ್ರಿಯ ಸಡಗರ ಎಲ್ಲರಿಗೂ ಒಂದು ರೀತಿಯಾದರೆ ಕಾರ್ಕಳದ ರಮಿತಾ ಅವರು ವಿಭಿನ್ನವಾಗಿ ನಾಡಿನ ಜನಕ್ಕೆ ನವದುರ್ಗೆಯರ ಒಂದೊಂದು ಕಥೆಯನ್ನು ಹೇಳುವುದರ ಜೊತೆಗೆ, ಒಂಬತ್ತು ದೇವಿಯ ಅಲಂಕಾರವನ್ನು ಮಾಡಿ ಎಲ್ಲೆಡೆ ಜನರಿಗೆ ತಲುಪುವ ಪ್ರಯತ್ನವನ್ನು ಮಾಡಿದ್ದಾರೆ.
ಸ್ವಂತ ವ್ಯಾಪಾರವನ್ನು ಮಾಡಿಕೊಂಡಿರುವ ಇವರು ಹವ್ಯಾಸವಾಗಿ ಆರಿಸಿಕೊಂಡದ್ದು ಸಮಾಜಸೇವೆ ಕ್ಷೇತ್ರವನ್ನು. ಹಿಂದೆ ಮಂಗಳೂರಿನಲ್ಲಿ ಶಾರದಾ ದೇವಿಯ ಅಲಂಕಾರವನ್ನು ಮಾಡಿರುವುದನ್ನು ನೋಡಿ ತಾವೂ ಕೂಡ ಊರಿನ ಸ್ನೇಹಿತರಿಗೆ ವಿಶೇಷವಾಗಿ ದೇವಿಯ ಕಥೆಯನ್ನು ಹೇಳಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಹೆಜ್ಜೆಯನ್ನಿಟ್ಟಿದ್ದಾರೆ. ಸ್ನೇಹಿತೆ ಶಾಂತಲಾ ಅಂಚಿ ಬ್ರೈಡ್ಸ್ ಅವರು ದಿನಕ್ಕೊಂದು ದೇವಿಯ ಅಲಂಕಾರವನ್ನು ಇವರಿಗೆ ಮಾಡಿ, ಛಾಯಾಗ್ರಹಣ ಸುಶೀಲ್ ಖುಷಿ ಫೋಟೋಗ್ರಫಿ ಇವರು ಮಾಡಿರುತ್ತಾರೆ.
ದಿವ್ಯ ಅಲಂಕಾರವನ್ನು ವಿಡಿಯೋದಲ್ಲಿ ಮಂಜುನಾಥ್ ಪೈಯವರು ಸೆರೆಹಿಡಿದಿರುತ್ತಾರೆ. ಕೇವಲ ಫೋಟೋ ಶೂಟ್ ಗಾಗಿ ಈ ಕಾರ್ಯಕ್ರಮವನ್ನು ಮಾಡದೆ ದೇವಿಯ ದಿವ್ಯ ರೂಪದೊಂದಿಗೆ ಚರಿತ್ರೆಯನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿ 9 ದೇವಿ, 9ದಿನ ಅಲಂಕಾರವನ್ನು ಮಾಡಿ ಕೊನೆಯ ದಿನ ದೇವಿಯನ್ನು ಜಲಸ್ಥಂಬನ ಕೂಡ ಮಾಡುವ ಛಾಯಾಗ್ರಹಣವನ್ನು ಮಾಡಿರುತ್ತಾರೆ. ಇವರ ಈ ಹೊಸ ಪ್ರಯೋಗ ಎಲ್ಲರ ಮೊಬೈಲ್ ಗಳಲ್ಲಿ, ಫೇಸ್ಬುಕ್ ಗಳಲ್ಲಿ, ಸ್ಟೇಟಸ್ ಗಳಲ್ಲಿ ಹರಿದಾಡಿರುವುದು ಅಷ್ಟೇ ನಿಜ.
Kshetra Samachara
14/10/2021 05:16 pm