ಮುಲ್ಕಿ: ಹಿಂದೂ ಯುವಸೇನೆ ಮುಲ್ಕಿ ಘಟಕ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಾತಃಕಾಲ ಎಂಟು ಗಂಟೆಗೆ ಅರ್ಚಕ ಪ್ರಶಾಂತ್ ಭಟ್ ನೇತೃತ್ವದಲ್ಲಿ ಗಣಹೋಮ, ಶಾರದಾ ಮಾತೆಯ ಪ್ರತಿಷ್ಠೆ ನಡೆಯಿತು.
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಉದ್ಘಾಟನೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ಬಳಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಹಿಂದೂ ಯುವಸೇನೆ ಮುಲ್ಕಿ ಸ್ಥಾಪಕಾಧ್ಯಕ್ಷರಾದ ಗೋವಿಂದ ಕೋಟ್ಯಾನ್, ಅಧ್ಯಕ್ಷರಾದ ಸುನಿಲ್ ಕುಮಾರ್ ಕಿಲ್ಪಾಡಿ, ಉಪಾಧ್ಯಕ್ಷ ಶಂಕರ್ ಪಡಂಗ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಚಾರ್ಯ ಕೋಶಾಧಿಕಾರಿ ರಂಗ ಕೋಟ್ಯಾನ್ ಮಹಿಳಾ ಮಂಡಳಿ ಅಧ್ಯಕ್ಷೆ ನೀರಜಾ ಅಗರ್ವಾಲ್, ಕಾರ್ಯದರ್ಶಿ ಸುಲತಾ, ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ, ಉದ್ಯಮಿ ಕಮಲಾಕ್ಷ ಬಡಗಿತ್ಲು, ಕಿಶೋರ್ ಶೆಟ್ಟಿ ಬಪ್ಪನಾಡು, ಶಿವಶಂಕರ್, ಜೀವನ ಪೂಜಾರಿ ಕೊಲ್ನಾಡು, ಸುರೇಶ್, ಲತಾ ಶೇಖರ್,ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
Kshetra Samachara
11/10/2021 03:57 pm