ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು ವಿಜಯ ಯುವ ಸಂಗಮದ ವತಿಯಿಂದ ನಿರ್ಮಿಸಲಾಗುವ ಮನೆಗೆ ಶಾಸಕರಿಂದ ಶಿಲಾನ್ಯಾಸ

ಬಜಪೆ: ವಿಜಯ ಯುವ ಸಂಗಮ ಎಕ್ಕಾರು ಸಂಸ್ಥೆಯ ಬೆಳ್ಳಿ ಹಬ್ಬವನ್ನು ಸಮಾಜಮುಖಿ ಚಿಂತನೆಯ ಸಾರ್ಥಕ ಹೆಜ್ಜೆಗಳ ಉತ್ಕೃಷ್ಟ ಕಾರ್ಯ ಯೋಜನೆಗಳ ಮೂಲಕ ನೆರವೇರಿಸಿಕೊಳ್ಳುವ ಕನಸನ್ನು ನನಸುಗೊಳಿಸುತ್ತಾ ಈಗಾಗಲೇ ಹಲವಾರು ಸೇವಾ ಕಾರ್ಯಗಳನ್ನು ಪೂರೈಸಿಕೊಂಡಿರುವ ಕೃತಾರ್ಥಭಾವದಲ್ಲಿದೆ.

ಸಂಸ್ಥೆಯ ಅದ್ವಿತೀಯ ಕನಸು ಸತ್ಪಾತ್ರರಿಗೆ ಆಶ್ರಯ ನೀಡುವ ಯೋಜನೆಯಂತೆ ಈಗಾಗಲೇ ಒಂದು ಮನೆಯ ನಿರ್ಮಾಣ ಪೂರ್ಣಗೊಳ್ಳುತ್ತಿದೆ. ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿಯವರ ಜನುಮ ದಿನದ ಸವಿ ನೆನಪಿಗಾಗಿ ಇಂದು ಎರಡನೆಯ ಮನೆಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.

ವಿಜಯ ಯುವ ಸಂಗಮ (ರಿ.) ಎಕ್ಕಾರು ಸಂಸ್ಥೆಯ ಸಕ್ರಿಯ ಸದಸ್ಯನಾಗಿದ್ದು ಅಕಾಲ ಮರಣಕ್ಕೀಡಾದ ನಮ್ಮೆಲ್ಲ ಸದಸ್ಯರ ಸನ್ಮಿತ್ರರಾಗಿದ್ದ ದಿ! ತಾರನಾಥ. ಬಿ ಇವರ ಪತ್ನಿ ಹಾಗು ಇಬ್ಬರು ಎಳೆ ಮಕ್ಕಳ ಮುಂದಿನ ಭವಿಷ್ಯ ಜೀವನಕ್ಕೆ ಸುಭದ್ರವಾದ ಆಶ್ರಯ ರೂಪಿಸುವ ಯೋಚನೆ ಸಂಸ್ಥೆಯದ್ದು. ಈ ಚಿಂತನೆಯಂತೆ ಇಂದು ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸಂಸ್ಥೆಯಿಂದ ನಿರ್ಮಿಸಿ ನೀಡಲಾಗುವ ಎರಡನೆಯ ಮನೆಗೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಪಂಜ, ದ.ಕ. ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲು, ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸುನಿಲ್ ಆಳ್ವ, ಸಂಸ್ಥೆಯ ಗೌರವ ಅಧ್ಯಕ್ಷ ರತ್ನಾಕರ ಶೆಟ್ಟಿ, ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/09/2021 10:41 am

Cinque Terre

2.81 K

Cinque Terre

0

ಸಂಬಂಧಿತ ಸುದ್ದಿ