ಮುಲ್ಕಿ:ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಮಹಾಮಾತೆ ದೇಯಿ ಬೈದೆತಿಯ ಸಂಕಲ್ಪದಂತೆ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವದಂತೆ ಚರ್ಚ್, ದರ್ಗಾ, ಬಸದಿ, ದೈವಸ್ಥಾನ, ದೇವಸ್ಥಾನ, ಗುರುದ್ವಾರ, ಗರೋಡಿಗಳಲ್ಲಿ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆಗೆ ಮುಲ್ಕಿ ಸಮೀಪದ ಪಡುಪಣಂಬೂರಿನ ಮುಲ್ಕಿ ಸೀಮೆಯ ಅರಮನೆಯಲ್ಲಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಚಾಲನೆ ನೀಡಿದರು
ಗುರು ಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಮಾತನಾಡಿ ಕೊರೋನಾ ಸಂಕಷ್ಟದ ದಿನಗಳಲ್ಲಿ ಔಷಧೀಯ ಸಸ್ಯಗಳ ಪಾತ್ರ ಬಹಳಷ್ಟಿದ್ದು ಕೊರೊನಾ ಸಹಿತ ಯಾವುದೇ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಆರೋಗ್ಯ ವೃದ್ಧಿಸಲು ಔಷಧೀಯ ಸಸ್ಯಗಳು ಬಹಳಷ್ಟು ಉಪಯುಕ್ತವಾಗಿದ್ದು ಔಷಧೀಯ ಸಸ್ಯಗಳ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭ ಬೆಹರಿನ್ ಬಿಲ್ಲವ ಸಂಘದ ಅಧ್ಯಕ್ಷ ರಾಜಕುಮಾರ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್,ಪಣಂಬೂರು ಎಸಿಪಿ ಮಹೇಶ್ ಕುಮಾರ್, ಉದ್ಯಮಿಗಳಾದ ಗುರುಮೂರ್ತಿ ರಾವ್, ವಿವೇಕ ರಾಜ್ ಪೂಜಾರಿ,, ಚಂದ್ರಶೇಖರ್, ಮಹಾನಗರ ಪಾಲಿಕೆ ಸದಸ್ಯ ಅನಿಲ್ ರಾಜ್, ಅರಮನೆಯ ಗೌತಮ ಜೈನ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ವೆಂಕಟೇಶ್ ಹೆಬ್ಬಾರ್, ಉದಯ ಅಮೀನ್ ಮಟ್ಟು, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/09/2021 07:28 pm