ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ನ 19 ನೇ ವಾರ್ಷಿಕೋತ್ಸವವು ಕ್ಲಬ್ ನ ಅಧ್ಯಕ್ಷ ಮಹೇಶ್ ಅಮೀನ್ ರವರ ಅಧ್ಯಕ್ಷತೆ ಯಲ್ಲಿ ಸರಳ ರೀತಿಯಲ್ಲಿ ಜರಗಿತು.
ಮುಖ್ಯ ಅತಿಥಿ ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ಮಾತನಾಡಿ ಕೊರೊನಾ ದಿನಗಳಲ್ಲಿ ಸಂಕಷ್ಟಕ್ಕೀಡಾದ ವರಿಗೆ ಸಹಾಯಹಸ್ತ ನೀಡುವ ಮುಖಾಂತರ ಸೋಂಕಿತರಿಗೆ ಸಹಾಯ ಹಸ್ತ ನೀಡುವ ಮುಖಾಂತರ ಧೈರ್ಯ ತುಂಬಿದ ಕ್ಲಬ್ ನ ಕಾರ್ಯ ವೈಖರಿ ಯನ್ನು ಶ್ಲಾಘಿಸಿ ಮುಂದಿನ ಅವಧಿಯಲ್ಲಿ ಸಾಮಾಜಿಕ , ಸಾಂಸ್ಕೃತಿಕ ಹಾಗೂ ಶೆಕ್ಷಣಿಕವಾಗಿ ಇನ್ನೂ ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ದಲ್ಲಿ ಕಿಲ್ಪಾಡಿ ಗ್ರಾಮದ ಹಿರಿಯ ಕೃಷಿಕ ಶ್ರೀ ಭೋಜ ದೇವಾಡಿಗ ಎಣ್ಣೆಗೇಣಿ ಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ಮಹೇಶ್ ಅಮೀನ್ ವಹಿಸಿದ್ದರು. ಕ್ಲಬ್ ನ ವತಿಯಿಂದ ಹಾಗೂ ಉಪಾಧ್ಯಕ್ಷ ಮಾಧವ ಪೂಜಾರಿ ಕಿಲ್ಪಾಡಿ ಯವರಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವಿಶೇಷವಾಗಿ 19 ನೇ ವಾರ್ಷಿಕೋತ್ಸವದ ನೆನಪಿಗಾಗಿ ಅಡಿಕೆ ಗಿಡವನ್ನು ನೆಡುವುದರ ಮುಖೇನ ಕೃಷಿಕ ಭೋಜ ದೇವಾಡಿಗ ರವರುವನಮಹೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಗಳಾಗಿ ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಸೇವಾ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಅಧ್ಯಕ್ಷ ಮೋಹನ್ ಶೆಟ್ಟಿ, ಪ್ರಮೀಳಾ ಮಾಧವ್, ಕ್ಲಬ್ ನ ಕಾರ್ಯದರ್ಶಿ ಲೋಹಿತ್ ಮಾಜೀ ಅಧ್ಯಕ್ಷ ಹರೀಶ್ ಅಮೀನ್, ನಿವೃತ್ತ ಯೋಧ ಮಾಧವ್ ಪೂಜಾರಿ, ಪುನೀತ್ ಸುವರ್ಣ, ತಿಲಕ್ ದೇವಾಡಿಗ , ಕೋಶಾಧಿಕಾರಿ ಅಶೋಕ್ ಸುವರ್ಣ, ಸತೀಶ್ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/08/2021 07:04 am