ಮಂಗಳೂರು: ಇಂದು ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮ. ದೇಶದೆಲ್ಲೆಡೆ ಹಬ್ಬದ ವಾತಾವರಣ, ರಾಷ್ಟ್ರಗೀತೆಯ ಅನುರಣನ.
ಕರುನಾಡ ಕರಾವಳಿಯ ನಾನಾ ಕಡೆಯೂ ಸ್ವಾತಂತ್ರ್ಯೋತ್ಸವದ ಖುಷಿ, ಸಡಗರವಿತ್ತು. ಅಲ್ಲಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಿತು. ಈ ನಡುವೆ ಬೆಳಗ್ಗೆ ಮೀನುಗಾರಿಕೆಗಾಗಿ ಕಡಲಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಪರ್ಸೀನ್ ಬೋಟ್ ನಲ್ಲಿ ರಾಷ್ಟ್ರ ಧ್ವಜಾರೋಹಣ ಜರುಗಿತು!
ಬೋಟ್ ನಲ್ಲಿದ್ದ ಮೀನುಗಾರರೆಲ್ಲ ಶಿಸ್ತು, ನೀಟಾಗಿ ನಿಂತು ತಿರಂಗಕ್ಕೆ ಗೌರವ ವಂದನೆ ಸಲ್ಲಿಸಿ, ಕಡಲಲೆಗಳ ಹಿಮ್ಮೇಳನದಲ್ಲಿ ರಾಷ್ಟ್ರಗೀತೆ ಹಾಡಿದರು. ಬೋಟ್ ನಲ್ಲಿದ್ದ ಮೀನುಗಾರರ ಸಹಿತ ಪರಿಸರದಲ್ಲಿದ್ದ ಬೇರೆ ಬೋಟ್, ದೋಣಿಯಲ್ಲಿದ್ದ ಮೀನುಗಾರರೂ ಸಾಥ್ ನೀಡಿ, ದೇಶಾಭಿಮಾನದ ಜಯಘೋಷ ಮೊಳಗಿಸಿದರು.
Kshetra Samachara
15/08/2021 08:35 pm