ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವೀಕೆಂಡ್ ಕರ್ಫ್ಯೂ ನಡುವೆ ಸ್ವಾತಂತ್ರ್ಯೋತ್ಸವಕ್ಕೆ ಭರದ ಸಿದ್ಧತೆ

ಮುಲ್ಕಿ: ಸರಕಾರದ ಕೋವಿಡ್ ನಿಯಮದಂತೆ ಮುಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ ಪಡುಪಣಂಬೂರು ಮೂಲ್ಕಿ ನಗರದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು ವೀಕೆಂಡ್ ಕರ್ಫ್ಯೂ ನಡುವೆ ಸ್ವಾತಂತ್ರ್ಯೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ.

ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಲು ಮಧ್ಯಾಹ್ನ 2 ಗಂಟೆ ಬಳಿಕ ಸರಕಾರದ ನಿರ್ದೇಶನದಂತೆ ಎಲ್ಲಾ ಅಂಗಡಿ,ವಸ್ತ್ರ ಮಳಿಗೆಗಳು ಮುಚ್ಚಿದ್ದರೆ ಹೋಟೆಲುಗಳು ಪ್ರಯಾಣಿಕರಿಗೆ ಪಾರ್ಸೆಲ್ ಮೂಲಕ ಪ್ರಯಾಣಿಕರಿಗೆ ಊಟ-ತಿಂಡಿ ವಿತರಿಸುತ್ತಿರುವುದು ಕಾಣುತ್ತಿತ್ತು.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎಂದಿನಂತೆ ತಡೆರಹಿತ ಬಸ್ಸು ಸಂಚಾರ, ಹಾಗು ಅನ್ಯ ರಾಜ್ಯಗಳ ಸರಕಾರಿ ಬಸ್ಸುಗಳು, ಗೂಡ್ಸ್ ಲಾರಿಗಳು ಸಂಚರಿಸಿದವು. ಮುಲ್ಕಿ ನಗರ ಹಾಗೂ ಒಳರಸ್ತೆಯಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯ ತಿರುಗಾಟ ನಡೆಸುತ್ತಿರುವುದು ಕಾಣುತ್ತಿತ್ತು.

ವೀಕೆಂಡ್ ಕರ್ಫ್ಯೂ ನಡುವೆ ಮೂಲ್ಕಿ, ಕಾರ್ನಾಡು, ಅಂಗಡಿ ಹಾಗೂ ಪಕ್ಷಿಕೆರೆ ಇನ್ನಿತರ ಕಡೆಗಳಲ್ಲಿ 75ನೇ ಸ್ವಾತಂತ್ರ್ಯೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು ಸ್ವಾತಂತ್ರ್ಯ ಯೋಧ ಕಾರ್ನಾಡ್ ಸದಾಶಿವ ರಾವ್ ವೃತ್ತ ಸ್ವಚ್ಛತೆ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ರಿಕ್ಷಾ ನಿಲ್ದಾಣದಲ್ಲಿ ಕಸ ಕಡ್ಡಿಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರದ ಸಿದ್ಧತೆ ನಡೆಸುತ್ತಿರುವುದು ಕಂಡುಬಂತು.

ಉಳಿದಂತೆ ಶನಿವಾರ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.

ಮುಲ್ಕಿ ತಾಲೂಕು ವ್ಯಾಪ್ತಿಯ ಎಳತ್ತೂರು, ತಾಳಿಪಾಡಿ ಯಲ್ಲಿ ಶನಿವಾರ 2 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

Edited By : Nagesh Gaonkar
Kshetra Samachara

Kshetra Samachara

14/08/2021 07:25 pm

Cinque Terre

15.57 K

Cinque Terre

0

ಸಂಬಂಧಿತ ಸುದ್ದಿ