ಮುಲ್ಕಿ: ಲಯನ್ಸ್ ಕ್ಲಬ್ ಮುಲ್ಕಿ ಮತ್ತು ಲಿಯೋ ಕ್ಲಬ್, ಜೆಸಿಐ ಮುಲ್ಕಿ ಶಾಂಭವಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗೊಂದಿಗೆ "ಅಟಿದ ಆಚಾರ ವಿಚಾರೊಲು ಬೊಕ್ಕ ವನಸು - ತಿನಸುಲು" ಕಾರ್ಯಕ್ರಮ ಮುಲ್ಕಿ ಬಂಟರ ಸಂಘದಲ್ಲಿ ನಡೆಯಿತು.
ಸಮಾರಂಭವನ್ನು ಮುಲ್ಕಿ ಜೇಸಿ ಸಂಸ್ಥೆಯ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮಾತನಾಡಿ ಹಿಂದಿನ ಕಾಲದ ಆಷಾಡ ಮಾಸದ ಮಹತ್ವದ ಬಗ್ಗೆ ಮಾತನಾಡಿ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ತುಳು ರಾಜ್ಯ ಭಾಷೆಯನ್ನಾಗಿ ಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ ಅಮೀನ್, ಹಿರಿಯ ಲಯನ್ಸ್ ಸದಸ್ಯ ಮೋಹನ್ ದಾಸ್ ಆರ್ ಶೆಟ್ಟಿ, ಮಾಜೀ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಉಪಾಧ್ಯಕ್ಷೆ ಶೀತಲ್ ಸುಶೀಲ್, ಲಿಯೋ ಜಿಲ್ಲಾಧ್ಯಕ್ಷ ಕವನ್ ಕುಬೆವೂರು, ಲಿಯೋ ಕ್ಲಬ್ ಅಧ್ಯಕ್ಷ ಸೃಜನ್ ಪುತ್ರನ್, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ದಯಾನಂದ ಕತ್ತಲ್ಸಾರ್ ರವರನ್ನು ಸನ್ಮಾನಿಸಲಾಯಿತು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಭೂಮಿಕಾ ಸುಜಿತ್, ಲಯನ್ಸ್ ಸಾಧಕರಾದ ರಾಲ್ಫಿ ಡಿ ಕೋಸ್ಟ, ನವೀನ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷ ವಿನೋದ್ ಸಾಲ್ಯಾನ್ ಸ್ವಾಗತಿಸಿದರು.ಸುದರ್ಶನ್ ಧನ್ಯವಾದ ಅರ್ಪಿಸಿದರು.ಉದಯ ಅಮಿನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಆಷಾಡ ಮಾಸದ ವಿವಿಧ ವನಸು- ತಿನಸು ಕಾರ್ಯಕ್ರಮ ನಡೆಯಿತು.
Kshetra Samachara
13/08/2021 01:53 pm