ಕಾಪು : ಜಾಫರ್ ಟವರ್ನಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಇದರ ಮೂರನೇ ಶಾಖೆ ನೂತನ ಕಾಪು ಶಾಖೆಯನ್ನು ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಉದ್ಘಾಟಿಸಿದರು.
ಈ ಸಂದರ್ಭ ಗುರ್ಮೆ ಸರೇಶ್ ಶೆಟ್ಟಿ ಮಾತನಾಡಿ, ಪ್ರತೀಯೊಬ್ಬ ಪುರುಷ ಯಾ ಮಹಿಳೆಯರ ವೃದ್ಧಾಪ್ಯವನ್ನು ಯೌವನದತ್ತ, ಮುಪ್ಪನ್ನು ಎಳೆವೆಯತ್ತ ಕೊಂಡೊಯ್ಯುವ ಹಾಗೂ ಮನುಷ್ಯನ ಬಾಹ್ಯ ಸೌಂದರ್ಯಕ್ಕೆ ವಿಶೇಷ ಮೆರುಗು ದೊರಕಿಸಿ ಕೊಡುವುದರಲ್ಲಿ ಕ್ಷೌರಿಕ ಬಂಧುಗಳು ಮತ್ತು ಬ್ಯೂಟೀಷಿಯನ್‌ಗಳ ಕೊಡುಗೆ ಅಪಾರವಾಗಿದೆ ಎಂದರು.
ಸೆಲೂನ್ ಸಾಮಾಗ್ರಿ ಮಳಿಗೆಯನ್ನು ಅಂತಾರಾಷ್ಟೀಯ ಕೇಶ ವಿನ್ಯಾಸಕಾರ ಡಾ| ಶಿವರಾಮ್ ಭಂಡಾರಿ ಮುಂಬೈ ಉದ್ಘಾಟಿಸಿದರು.
ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರೊ| ನವೀನ್‌ಚಂದ್ರ ಭಂಡಾರಿ ಮಣಿಪಾಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್‌ಎಸ್. ಕೆ., ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಭಾಸ್ಕರ ಕಾಮತ್, ಸಮಾಜರತ್ನ ಕೆ. ಲೀಲಾಧರ ಶೆಟ್ಟಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/08/2021 07:42 pm