ಮುಲ್ಕಿ: ಸ್ವಚ್ಛತೆಯ ಮೂಲಕ ಗ್ರಾಮದ ಅಭಿವೃದ್ಧಿ ಜೊತೆಗೆ ರಾಷ್ಟ್ರಕ್ಕೆ ವಕ್ಕರಿಸಿದ ಮಹಾಮಾರಿ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ನವಚೇತನ ಯುವಕ ಮಂಡಲದ ಅಧ್ಯಕ್ಷ ಸುಧೀರ್ ಶೆಟ್ಟಿ ಹೇಳಿದರು.
ಅವರು ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಮತ್ತು ನವಚೇತನ ಯುವಕ ಮಂಡಲ ( ರಿ) ಏಳಿಂಜೆ ಯ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಗ್ರಾಮ ಹಸಿರು ಗ್ರಾಮ ಯೋಜನೆಯಲ್ಲಿ ಭಾನುವಾರದಂದು ಕಿನ್ನಿಗೋಳಿ ಸಮೀಪದ ಎಳಿಂಜೆಯ ಶ್ರೀ ಜಾರಂದಾಯ ದೈವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕ ಮಂಡಲದ ಕಾರ್ಯದರ್ಶಿ ಸುನಿಲ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹರೀಶ್ ಶೆಟ್ಟಿ , ದೇವಿಪ್ರಸಾದ್ ಶೆಟ್ಟಿ , ಕೃಷ್ಣ ಮೂಲ್ಯ, ಲಕ್ಷ್ಮಣ ಬಿ ಬಿ ಭಾಸ್ಕರ ಶೆಟ್ಟಿ , ಹೇಮನಾಥ ಶೆಟ್ಟಿ , ಸುಧಾಕರ ಸಾಲಿಯಾನ್, ನಾಗೇಶ್ ಪೂಜಾರಿ ಮತ್ತು ಸಂಘದ ಇತರ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು
Kshetra Samachara
01/08/2021 07:50 pm