ಮುಲ್ಕಿ: ಕಿನ್ನಿಗೋಳಿ ರೋಟರಿ ಕ್ಲಬ್ ನೇತೃತ್ವದಲ್ಲಿ ವನಮಹೋತ್ಸವ ರವಿವಾರ ಸಂಕಲಕರಿಯ ಮುಂಡ್ಕೂರು ದೊಡ್ಡಮನೆ ಮೈದಾನದಲ್ಲಿ ನಡೆಯಿತು.ಕಿನ್ನಿಗೋಳಿ ರೋಟರಿ ಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ಸ್ಥಳೀಯ ವಿಜಯ ಯುವಕ ಸಂಘ,ಖುಷಿ ಮಹಿಳಾ ಮಂಡಲ,ಕಿನ್ನಿಗೋಳಿಯ ಇನ್ನರ್ ವೀಲ್ ಕ್ಲಬ್,ಮುಂಡ್ಕೂರಿನ ಭಾರ್ಗವ ಜೇಸೀಸ್ ನ ಸಹಭಾಗಿತ್ವದಲ್ಲಿ ರೋಟರಿ ಅಧ್ಯಕ್ಷ ಸ್ವರಾಜ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಅರಣ್ಯ ರಕ್ಷಕ ರಾಜೂ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವನಮಹೋತ್ಸವ ಕೇವಲ ಕಾಟಾಚಾರಕ್ಕೆ ಸೀಮಿತವಾಗಿರದೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತಾಗಬೇಕು ಎಂದರು
ಯುವಕ ಸಂಘದ ಅಧ್ಯಕ್ಷ ಚಂದ್ರಹಾಸ ಎಂ,ಮಹಿಳಾ ಮಂಡಲದ ಅಧ್ಯಕ್ಷೆ ಸ್ನೇಹಾ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ರೇಣುಕಾ ಸ್ವರಾಜ್,ಕಾರ್ಯದರ್ಶಿ ಚಂದ್ರ ಶೆಟ್ಟಿ,ಮಮತಾ ಶೆಟ್ಟಿ,ರೋಟರಿಯ ಸದಸ್ಯರು ಪಂಚಾಯತ್ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.
ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
01/08/2021 04:18 pm