ಮುಲ್ಕಿ: ಮುಲ್ಕಿ ಇತಿಹಾಸ ಪ್ರಸಿದ್ಧ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಅಂಗವಾಗಿ ಶನಿವಾರ ಚಂಡಿಕಾ ಯಾಗ ಹಾಗೂ ಶ್ರೀದೇವರ ಪಂಜಿನಡ್ಕ ಸವಾರಿ ಕಟ್ಟೆ ಪೂಜೆ, ಬಲಿ ಉತ್ಸವ ನಡೆಯಿತು.
ಶನಿವಾರ ಬೆಳಗ್ಗೆ ವೇದವ್ಯಾಸ ತಂತ್ರಿಗಳಿಂದ ಚಂಡಿಕಾ ಯಾಗ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ದೇವರ ಪಂಜಿನಡ್ಕ ಸವಾರಿ, ಕಟ್ಟೆ ಪೂಜೆ ನಡೆಯಿತು.
ರಾತ್ರಿ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ, ವಸಂತ ಮಂಟಪದಲ್ಲಿ ಪೂಜೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸದಸ್ಯರಾದ ಚಂದ್ರಹಾಸ ಸುವರ್ಣ, ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ, ಪಂ. ಸದಸ್ಯ ವಿಕಾಸ್ ಶೆಟ್ಟಿ ಕೆಂಚನಕೆರೆ,ಬಾಲಕೃಷ್ಣ ಶೆಟ್ಟಿ ಶಿಮಂತೂರು,ಸತೀಶ್ ಶೆಟ್ಟಿಕೆರೆ ಗುತ್ತು, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಉದಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಅಂಗರಗುಡ್ಡೆ ರಾಮನಗರ ಶ್ರೀರಾಮಾಂಜನೇಯ ಮಕ್ಕಳ ಮೇಳದಿಂದ "ಶ್ರೀದೇವಿ ಭ್ರಮರಾಂಬಿಕೆ " ಯಕ್ಷಗಾನ ನಡೆಯಿತು.
ಭಾನುವಾರ ದೇವಳದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ಕುಬೆವೂರು ಬೈಲುಮನೆ ನಾರಾಯಣ ಭಂಡಾರಿ ಅವರಿಂದ ಅನ್ನ ಸಂತರ್ಪಣೆ, ಸಂಜೆ ದೇವರ ಕುಬೆವೂರು ಸವಾರಿ, ಕಟ್ಟೆ ಪೂಜೆ ನಡೆಯಲಿದೆ.
Kshetra Samachara
28/02/2021 10:28 am