ಉಡುಪಿ : ರಾಜ್ಯದಲ್ಲಿ ಕುತೂಹಲ ಹುಟ್ಟಿಸಿದ ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕಾರ್ಯಕ್ರಮ ಬಸ್ರೂರಿನಲ್ಲಿ ಸಂಚಲನ ಮೂಡಿಸಿದೆ. ಬಸ್ರೂರಿನಲ್ಲಿ ನಡೆದ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿ ಗೊಂಡಿತು,ಅದರಲ್ಲೂ ಕುಂದಾಪುರದಲ್ಲಿ ಶಿವಾಜಿ ಮಹರಾಜರ ಐತಿಹಾಸಿಕ ದಾಖಲೆ ಪುನರ್ ನೆನಪಿಸುವ ಹಿನ್ನಲೆಯಲ್ಲಿ ಬಸ್ರೂರಿನಲ್ಲಿ ನಡೆದ ಕಾರ್ಯಕ್ರಮ ಮತ್ತೆ ಹಿಂದೂ ಸಂಘಟನೆಗಳನ್ನು ಒಟ್ಟು ಮಾಡಿದೆ.
ಬಸ್ರೂರು ಶಾರದ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ರಾಜ್ಯದ ಸಾವಿರಾರು ಕಾರ್ಯಕರ್ತರು ಸಾಕ್ಷಿಯಾದರು. 16ನೇ ಶತಮಾನದಲ್ಲಿ ಬಸ್ರೂರಿಗೆ ಬಂದು ಪೋರ್ಚುಗೀಸರಿಂದ ಮುಕ್ತಿಗೊಳಿಸಿದ ಶಿವಾಜಿ ಮಹಾರಾಜರ ಸ್ಮರಿಣೆಯ ಅಂಗವಾಗಿ ಬಸ್ರೂರಲ್ಲಿ ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ ಕಾರ್ಯಕ್ರಮ ನಡೆಯಿತು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡರು. ಶಿವಾಜಿ ಹಾದು ಹೋದ ಉತ್ತರಕನ್ನಡದ ಕಾರವಾರ, ಶಿವಮೊಗ್ಗ ಹಾಗೂ ಮೈಸೂರು ಕಡೆಗಳಿಂದ ಸಹಸ್ರಾರು ಮಂದಿ ಯುವಕರು ಮೂರು ಮಾರ್ಗವಾಗಿ ಬೈಕ್ ರ್‍ಯಾಲಿಯಲ್ಲಿ ಬಂದು ಸಮಾರಂಭದಲ್ಲಿ ಸೇರಿಕೊಂಡರು. ಬಳಿಕ ಬಸ್ರೂರು ಕಾಲೇಜಿನ ಮೈದಾನದಲ್ಲಿ ಹಾಕಲಾಗಿದ್ದ ಅದ್ದೂರಿನ ಕೋಟೆಯಾಕಾರದ ಸ್ಪೇಜ್ ನಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಡಗಲಿಯ ಹಲ ಸಂಸ್ಥಾನದ ಹಲವೀರಪ್ಪ ಸ್ವಾಮೀಜಿ ರಾಮ ಮತ್ತು ಶಿವಾಜಿ ಆದರ್ಶಗಳನ್ನು ತಿಳಿದರು.
ನಂತರ ಮಾತನಾಡಿದ ಯುವಾ ಬ್ರಿಗೇಡ್‌ನ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಪೋರ್ಚುಗೀಸರು, ಡಚ್ಚರ ನೆಲೆಯಾಗಿದ್ದ ಕರಾವಳಿಯಲ್ಲಿ ಅದರಲ್ಲೂ ಬಸ್ರೂರಿನಲ್ಲೇ ಪರಕೀಯರ ವಿರುದ್ಧ ದೇಶದ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆ ಕಾರ್‍ಯವನ್ನು ಮಾಡಿದ್ದು ಛತ್ರಪತಿ ಶಿವಾಜಿ. ಆ ದಿನವೇ ಶಿವಾಜಿಯವರು ಕನ್ನಡದ ನೆಲದಿಂದಲೇ ಹಿಂದೂ ಸಾಮ್ರಾಜ್ಯ ಕಟ್ಟುವ ಶಪಥಗೈದಿದ್ದರು. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಶಿವಾಜಿಯವರನ್ನು ಕೇವಲ ಒಂದು ಜಾತಿ, ಭಾಷೆಗೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ ಎಂದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಯುವಬ್ರಿಗೇಡ್ ದಕ್ಷಿಣ ಪ್ರಾಂತದ ಸಂಚಾಲಕ ಚಂದ್ರಶೇಖರ್ ನಂಜನಗೂಡು ಮತ್ತಿತರರು ಉಪಸ್ಥಿತರಿದ್ದರು.
ಬಸ್ರೂರಿನಲ್ಲಿ ಶಿವಾಜಿ ಮಹಾರಾಜನ ಬೃಹತ್ ಪುತ್ಥಳಿಯ ಅನಾವರಣ ಕಾರ್ಯಕ್ರಮ ಕೆಲವು ಕಾನೂನು ತೊಡಕುಗಳಿಂದ ರದ್ದಾಗಿತ್ತು, ಮುಂದಿನ ದಿನದಲ್ಲಿ ಶಿವಾಜಿ ಮಹಾರಾಜನ ಮ್ಯೂಸಿಯಂನ ಬಸಿರಿನಲ್ಲಿ ನಿರ್ಮಾಣ ಮಾಡಲು ಯುವ ಬ್ರಿಗೇಡ್ ತಂಡ ಪಣತೊಟ್ಟಿದೆ
ಒಟ್ಟಾರೆಯಾಗಿ ಈ ಕಾರ್ಯಕ್ರಮದ ಮೂಲಕ ಕರಾವಳಿ ಕುಂದಾಪುರದಲ್ಲಿ ಮತ್ತೆ ಶಿವಾಜಿ ಹೆಸರನಲ್ಲಿ ಇತಿಹಾಸ ಪುಟ ತೆರೆಯುವ ಕಾರ್ಯಕ್ಕೆ ಚಾಲನೆ ನೀಡಿದಂತಾಗಿದೆ. ಮುಂದೆ ಇದೇ ವಿಚಾರವಾಗಿ ಒಂದು ವಾದ ವಿವಾದಗಳು ನಡೆದರು ಆಶ್ಚರ್ಯವಿಲ್ಲ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
22/02/2021 07:12 pm