ಮುಲ್ಕಿ: ಪಕ್ಷಿಕೆರೆ ಸಮಿಪದ ಪಂಜ ಕೊಯಿಕುಡೆ ಶ್ರೀ ಶನೀಶ್ವರ ಮಂಡಳಿಯ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ ನಡೆಯಿತು.
ಕೆಮ್ರಾಲ್ ಗ್ರಾಪಂ ನೂತನ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಪೂಜಾರಿ ಊರಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
'ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಗೌರವಿಸುವುದರ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಮಂಡಳಿಯ ಕಾರ್ಯ ಪ್ರಶಂಸನೀಯ' ಎಂದು ಶ್ರೀ ಶನೀಶ್ವರ ಮಂಡಳಿ ಗೌರವಾಧ್ಯಕ್ಷ ಪಂಜ ವಾಸುದೇವ ಭಟ್ ತಿಳಿಸಿದರು.
ಅತಿಥಿಗಳಾಗಿ ನಲ್ಯಗುತ್ತು ವಿರಾರ್ ಶಂಕರ್ ಶೆಟ್ಟಿ, ಜಯ ಶೆಟ್ಟಿ, ಪಂಜದಗುತ್ತು ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಮೊಯಿಲಿ, ಕೆಮ್ರಾಲ್ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ದೇವಾಡಿಗ ಪಂಜ, ಸದಸ್ಯ ಕೇಶವ ಪೂಜಾರಿ, ಮಂಡಳಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಭಾಸ್ಕರ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಬಳಿಕ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿ ದೇವರ ಪಾರಾಯಣ ನಡೆಯಿತು.
Kshetra Samachara
21/02/2021 12:23 pm