ಮುಲ್ಕಿ: ಕಿನ್ನಿಗೋಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಯುಗಪುರುಷ ಸ್ಥಾಪನೆ ಮೂಲಕ ಅಸಂಖ್ಯಾತ ಲೇಖಕರಿಗೆ ಅವಕಾಶ ಮಾಡಿಕೊಟ್ಟ ಕೊ.ಅ. ಉಡುಪರು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಆಸ್ತಿಯಾಗಿದ್ದು, ಅವರ ಸಾಧನೆಯಿಂದ ಸಾಹಿತ್ಯ ಕ್ಷೇತ್ರ ಇಂದಿಗೂ ಬೆಳೆಯುತ್ತಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಮತ್ತು ಯುಗಪುರುಷ ಕಿನ್ನಿಗೋಳಿ ಸಂಯುಕ್ತ ಆಶ್ರಯದಲ್ಲಿ ತೋಕೂರಿನ ತಪೋವನದ ಎಂ.ಆರ್.ಪೂಂಜ ಐ.ಟಿ.ಐ. ನಲ್ಲಿ ಜರುಗಿದ ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ.ಅ.ಉಡುಪ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು. ಮುಲ್ಕಿ ವಲಯ ಪತ್ರಕರ್ತರ ಸಮೂಹದ ಮಾಜಿ ಅಧ್ಯಕ್ಷ ಹರೀಶ್ ಹೆಜ್ಮಾಡಿ 'ಪತ್ರಕರ್ತರ ಜವಾಬ್ದಾರಿ' ಎಂಬ ವಿಷಯದ ಬಗ್ಗೆ ಮಾತನಾಡಿದರು. ಶಶಿಕಲಾ ಕೆಮ್ಮಡೆ ಅವರಿಂದ ಕೊ.ಅ.ಉಡುಪ ರಚಿತ ಆಯ್ದ ಕವನಗಳ ವಾಚನ ನಡೆಯಿತು. ಹೊಸ ಅಂಗಣ ಪತ್ರಿಕೆ ಸಂಪಾದಕ ಡಾ.ಹರಿಶ್ಚಂದ್ರ ಪಿ. ಸಾಲಿಯಾನ್, ಮುಲ್ಕಿ ವಲಯ ಪತ್ರಕರ್ತರ ಸಮೂಹದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ತೋಕೂರು ತಪೋವನದ ಎಂ.ಆರ್.ಪೂಂಜ ಐ.ಟಿ.ಐ. ನಿವೃತ್ತ ಪ್ರಾಂಶುಪಾಲ ವೈ.ಎನ್. ಸಾಲಿಯಾನ್, ಪ್ರಾಂಶುಪಾಲ ಹರಿ ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತ್ಯ ಪರಿಷತ್‌ನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಗೌರವ ಕೋಶಾಧಿಕಾರಿ ಕೃಷ್ಣಮೂರ್ತಿ ಪಿ., ಗೌರವ ಕಾರ್ಯದರ್ಶಿ ದೇವಕಿ ಅಮೃತ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪದ್ಮನಾಭ ಭಟ್ ವಂದಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.
Kshetra Samachara
08/02/2021 10:27 pm