ಪಡುಬಿದ್ರಿ: ಪಡುಬಿದ್ರಿ ಠಾಣೆ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷೆಯ ಬಗ್ಗೆ ಪಡುಬಿದ್ರಿ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಕೆ. ಜಯ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ರಸ್ತೆ ದಾಟುವಾಗ ಅತ್ಯಂತ ಕಾಳಜಿಯಿಂದ ರಸ್ತೆ ದಾಟಬೇಕು. ರಸ್ತೆಯ ಇಕ್ಕೆಲದಲ್ಲೂ ವಾಹನ ಇಲ್ಲ ಎನ್ನುವುದನ್ನು ಖಚಿತ ಪಡಿಸಿಯೇ ರಸ್ತೆ ದಾಟಬೇಕು. ಯಾವ ಕಾರಣಕ್ಕೂ ಶಾಲಾ ಮಕ್ಕಳು ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳನ್ನು ಚಾಲನೆ ಮಾಡಲೇ ಬಾರದು. ಒಂದು ವೇಳೆ ಯಾವುದೇ ಅಪಘಾತ ಅಥವಾ ಅಹಿತಕರ ಘಟನೆ ನಡೆದರೆ ಅದಕ್ಕೆ ಪಾಲಕರೇ ಜವಾಬ್ದಾರರಾಗುತ್ತಾರೆ ಎಂದರು.
ಪ್ರೌಢಶಾಲೆ ಪ್ರಿನ್ಸಿಪಾಲ್ ಶಾಂತಾ ಶೆಟ್ಟಿಗಾರ್, ಪ್ರಾಥಮಿಕ ವಿಭಾಗದ ಪ್ರಾಧ್ಯಾಪಕಿ ಸುಮಾ ಸುರೇಶ್, ಉಚ್ಚಿಲ ಬಡಾ ಗ್ರಾಮದ ಬೀಟ್ ಮುಖ್ಯಧಿಕಾರಿ ನರೇಶ್ ಎನ್., ಪೊಲೀಸ್ ಸಿಬ್ಬಂದಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/01/2021 09:30 pm