ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಿಲ್ಪಾಡಿ ಶ್ರೀ ಕುಮಾರಮಂಗಲ ದೇವಸ್ಥಾನದಲ್ಲಿ ಕಿರುಷಷ್ಠಿ ಸಂಭ್ರಮ

ಮುಲ್ಕಿ: ಮುಲ್ಕಿ ಕಿಲ್ಪಾಡಿ ಶ್ರೀ ಕುಮಾರಮಂಗಲ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಆಶ್ಲೇಷ ಬಲಿ ಹಾಗೂ ದೇವರಿಗೆ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭ ವೇ.ಮೂ.ಶ್ರೀಕಾಂತ್ ಭಟ್ ಕೊಲಕಾಡಿ ಮಾತನಾಡಿ, ನಿರ್ಮಲ ಮನಸ್ಸಿನಿಂದ ಭಗವಂತನನ್ನು ಆರಾಧಿಸುವ ಮೂಲಕ ನೆಮ್ಮದಿ ಸಾಧ್ಯ. ನಾಗಾರಾಧನೆ ಮೂಲಕ ಲೋಕಕ್ಕೆ ಬಂದಿರುವ ಸಮಸ್ತ ಕಂಟಕ ನಾಶ ಮಾಡಿ, ಭಕ್ತರ ಇಷ್ಟಾರ್ಥಗಳನ್ನು ದೇವರು ಪೂರೈಸಲಿ. ಮುಂದಿನ ದಿನಗಳಲ್ಲಿ ದೇವಳದ ಜೀರ್ಣೋದ್ಧಾರ ನಡೆಯಲಿದ್ದು ಭಕ್ತರು ತನು-ಮನ-ಧನದಿಂದ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಬಳಿಕ ದೇವರ ಮಹಾಪೂಜೆ ನಡೆದು, ಅನ್ನಪ್ರಸಾದದಲ್ಲಿ ಭಕ್ತರು ಭಾಗಿಯಾದರು. ದೇವಳದ ಆಡಳಿತ ಮೊಕ್ತೇಸರ ಚಂದ್ರಶೇಖರ ಮಯ್ಯ, ಜೀರ್ಣೋದ್ಧಾರ ಸಮಿತಿಯ ಧರ್ಮದರ್ಶಿ ಹರಿಕೃಷ್ಣ ಪುನರೂರು, ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಗ್ರಾ. ಪಂ. ಸದಸ್ಯ ದಯಾನಂದ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

19/01/2021 05:56 pm

Cinque Terre

15.93 K

Cinque Terre

0

ಸಂಬಂಧಿತ ಸುದ್ದಿ