ಮಂಗಳೂರು: ಮದುವೆ ಸಮಾರಂಭದ ಪ್ರಮುಖ ಘಟ್ಟವೆಂದರೆ ಮದುಮಗ, ಮದುಮಗಳಿಗೆ ಶುಭ ಗಳಿಗೆಯಲ್ಲಿ ಕರಿಮಣಿ ಸರ ಕಟ್ಟುವುದು.
ಅದಕ್ಕಿಂತ ಮೊದಲು ಆ ಕರಿಮಣಿ ಸರವನ್ನು ಕುಟುಂಬದ ಹಿರಿಯರು, ಮುತ್ತೈದೆಯರು ಮುಟ್ಟಿ ತಮ್ಮ ಆಶೀರ್ವಾದ ಸಹಿತ ಶುಭ ಹಾರೈಸುತ್ತಾರೆ. ಬಳಿಕ ಗಂಡು, ಹೆಣ್ಣಿಗೆ ತಾಳಿ ಕಟ್ಟುತ್ತಾನೆ.
ಆದರೆ, ಇಲ್ಲೊಂದು ಮದುವೆಯಲ್ಲಿ ಡ್ರೋಣ್ ಮೂಲಕ ಗಾಳಿಯಲ್ಲಿ ತೇಲಾಡಿಕೊಂಡು ಬಂದಿತ್ತು ಕರಿಮಣಿ ಸರ! ಆಗ ಮೊಳಗಿದ ಧ್ವನಿಯು ಉಪಸ್ಥಿತರಿದ್ದ ಗುರುಹಿರಿಯರಲ್ಲಿ ಆಶೀರ್ವಾದ ಬೇಡಿದ ಬಳಿಕ, ಆ ಕರಿಮಣಿ ಸರ ಹೊತ್ತ ಡ್ರೋಣ್ ರೊಯ್ಯನೇ ಮದುವೆ ಮಂಟಪದೆಡೆಗೆ ಸಾಗಿ ಮದುಮಗನ ಕೈಯಲ್ಲಿ ಕರಿಮಣಿ ಸರ ನೀಡುತ್ತದೆ!
ಕರಾವಳಿಯ ಒಂದೆಡೆ ನಡೆದ ಕ್ರಿಶ್ಚಿಯನ್ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಈ ವಿಶೇಷ ದೃಶ್ಯ ಕಂಡು ಬಂತು.
ಈ ಅಪರೂಪದ ಮದುವೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Kshetra Samachara
16/01/2021 05:06 pm