ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಕರ ಸಂಕ್ರಾಂತಿ ಪರ್ವ ಸಡಗರ; ಶ್ರೀ ಕೃಷ್ಣಮಠದಲ್ಲಿ ಭಕ್ತ ಸಮೂಹ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಭಕ್ತ ಸಂದಣಿ ಕಂಡು ಬಂದಿದ್ದು, ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಶ್ರೀಕೃಷ್ಣನ ದರ್ಶನ ಪಡೆದರು.

ಎರಡು ದಿನಗಳ ಹಿಂದಷ್ಟೇ ಶ್ರೀಕೃಷ್ಣಮಠದಲ್ಲಿ ಅನ್ನಪ್ರಸಾದ ಪ್ರಾರಂಭಿಸಲಾಗಿದೆ. ಶ್ರೀ ಮುರಳೀಧರನ ದರ್ಶನ ಪಡೆದ ಭಕ್ತಾದಿಗಳು ಇಂದು ಸಾವಿರಾರು ಸಂಖ್ಯೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು. ಮಕರ ಸಂಕ್ರಾಂತಿ ಪರ್ವ ಪ್ರಯುಕ್ತ ಇಂದು ರಾತ್ರಿಯಿಂದ ಶ್ರೀಕೃಷ್ಣಮಠದಲ್ಲಿ ಮೂರು ರಥಗಳ ಉತ್ಸವ ನಡೆಯಲಿದೆ. ನಾಳೆ ಬೆಳಗ್ಗೆ 9ರ ಹೊತ್ತಿಗೆ ಉತ್ಸವ ಮತ್ತು ರಥೋತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಭಕ್ತರಿಗೆ ಕೋವಿಡ್ ನಿಯಮಾವಳಿ ಕಟ್ಟುನಿಟ್ಟಿನ ಪಾಲನೆ ಜತೆಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಪಾಸ್ ವ್ಯವಸ್ಥೆ ಮಾಡಲಾಗಿದೆ.

Edited By : Manjunath H D
Kshetra Samachara

Kshetra Samachara

14/01/2021 03:55 pm

Cinque Terre

20.33 K

Cinque Terre

0

ಸಂಬಂಧಿತ ಸುದ್ದಿ