ಉಡುಪಿ: ಉಡುಪಿಯ ಮಂಗಳಮುಖಿಯರು ಆಶ್ರಯ ಸಮುದಾಯ ಸಂಘಟನೆ ಎಂಬ ಸಂಘ ಹುಟ್ಟುಹಾಕಿ ತಮ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ಸಾಮಾಜಿಕ ಚಟುವಟಿಕೆ ಕೂಡ ಈ ಸಂಘದ ಮೂಲಕ ಹಮ್ಮಿಕೊಳ್ಳುತ್ತಾರೆ. ಸಂಘಟನೆ ವತಿಯಿಂದ ನಗರದ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಮಂಗಳಮುಖಿಯರು ತಾವು ಯಾರಿಗೂ ಕಡಿಮೆ ಇಲ್ಲದಂತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಮೆರೆದರು.
ಕಾರ್ಯಕ್ರಮದ ಅಂಗವಾಗಿ ಇದೇ ಮೊದಲ ಬಾರಿಗೆ ಫ್ಯಾಶನ್ ಶೋ ಹಮ್ಮಿಕೊಳ್ಳಲಾಗಿತ್ತು. ಮಂಗಳಮುಖಿಯರು ಸ್ಟೇಜ್ ಮೇಲೆ ವಯ್ಯಾರದಿಂದ ಕ್ಯಾಟ್ ವಾಕ್ ಮಾಡಿ ಫ್ಯಾಶನ್ ಶೋಗೆ ಕಳೆ ತಂದು, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
Kshetra Samachara
11/01/2021 04:37 pm