ಮಂಗಳೂರು: ಆರೋಗ್ಯ- ಪರಿಸರ ಅರಿವು, ಫಿಟ್ ನೆಸ್, ಸ್ತ್ರೀ ಸಬಲೀಕರಣ, ಕಡಲ ಕಿನಾರೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಯುವ ಸಮೂಹದ ಬಿಗ್ ಬ್ಯಾಂಗ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ತಣ್ಣೀರುಬಾವಿ ಕಡಲ ತೀರದಲ್ಲಿ ಇಂದು ಮೇಯರ್ ದಿವಾಕರ ಪಾಂಡೇಶ್ವರ್ ಉದ್ಘಾಟಿಸಿದರು.
ಮೊಹಮ್ಮದ್ ಫೌಝಾನ್ ಶೇಕ್ ಮತ್ತು ಜೀವನ್ ಸ್ಟಾವ್ಲಿನ್ ತೌರೋ ನೇತೃತ್ವದ ಟೀಂ ಬಿಗ್ ಬ್ಯಾಂಗ್ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮ ನಗರದ ಮಂಗಳಾ ಸ್ಟೇಡಿಯಂನಿಂದ ತಣ್ಣೀರುಬಾವಿ ಕಡಲ ತೀರಕ್ಕೆ ಸೈಕಲ್ ರೈಡಿಂಗ್ ಹಾಗೂ ಮಹಿಳೆಯರು ಬೈಕ್ ರೈಡಿಂಗ್ ನಡೆಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ಬಳಿಕ ಬೀಚ್ ಸ್ವಚ್ಛತೆ ನಡೆಯಿತು. ಅನಂತರ ಮಂಗಳೂರು ಸರ್ಫ್ ಕ್ಲಬ್ ವತಿಯಿಂದ ಸರ್ಫಿಂಗ್ ಹಾಗೂ ವಿಡಿಆರ್ ಡಿ ಸರ್ಫ್ ಲೈಫ್ ತಂಡದಿಂದ ಸಮುದ್ರದಲ್ಲಿ ಮುಳುಗುವವರ ರಕ್ಷಣಾ ಕಾರ್ಯಗಳ ಬಗ್ಗೆ ಪರಿಣತರಿಂದ ತರಬೇತಿ ನಡೆಯಿತು. ಜೊತೆಗೆ ಝೂಸ್ ಫಿಟ್ ನೆಸ್ ಸೆಂಟರ್ ನಿಂದ ನಡೆಸಿಕೊಟ್ಟ ಝೂಂಬಾ ನೃತ್ಯದಲ್ಲಿ ಎಲ್ಲರೂ ಭಾಗವಹಿಸಿದರು. ಎಂಎಸ್ ಸ್ಪೋರ್ಟ್ಸ್ ಸಂಸ್ಥೆ 400 ಜನರಿಗೆ ಉಚಿತವಾಗಿ ಮಾಸ್ಕ್ ಹಂಚಿದರು.
ಅಲ್ಲದೆ ಎಸ್ ಕ್ಯೂಬ್, ಕರ್ನಾಟಕ ಏಜೆನ್ಸಿ ಮಹೀಂದ್ರಾ ಸಂಸ್ಥೆಗಳು ಈ ಕಾರ್ಯಕ್ರಮದೊಂದಿಗೆ ಕೈಜೋಡಿಸಿತು. ಮನಪಾ ಸದಸ್ಯೆ ಸುನೀತಾ, ಪಮ್ಮಿ ಕೊಡಿಯಾಲ್ ಬೈಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
Kshetra Samachara
10/01/2021 06:00 pm